ಒಳ್ಳೆಯ ಅಭ್ಯಾಸ ಜೀವನೋತ್ಸಾಹಕ್ಕೆ ದಾರಿ: ಡಾ. ಎಂ. ರವಿರಾಜ್ ಶೆಟ್ಟಿ
ಜ್ಞಾನಕ್ಕಿಂತ ವಿವೇಕ ಮುಖ್ಯ: ಶರಣ ಕುಮಾರ್

ಗಣಿತನಗರ: ಏಕಲವ್ಯನಿಂದ ಶ್ರದ್ಧೆಯನ್ನು, ಕೃಷ್ಣ–ಸುಧಾಮರ ಗೆಳೆತನದಿಂದ ಪ್ರಜ್ಞೆಯನ್ನು ಹಾಗೂ ಶಬರಿಯಿಂದ ಭಕ್ತಿಯನ್ನು ಕಲಿಯಬೇಕು. ಇಂತಹ ಮಾದರಿಗಳು ನಮ್ಮಲ್ಲಿ ಭಾವನಾತ್ಮಕವಾದ ಬೆಸುಗೆಯನ್ನು ಒದಗಿಸಿವೆ. ಆದರೆ ಹಿಂದಿನ ಕೆಲವು ಸಂಶೋಧನೆಗಳು ಇಂದು ಮಾರಕವಾಗುತ್ತಿರುವಾಗ ಹಾಗೂ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಈ ಹೊತ್ತಿನಲ್ಲಿ ಜ್ಞಾನದೊಂದಿಗೆ ವಿವೇಕವೂ ಬಹಳ ಮುಖ್ಯ. ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಧಾರೆಯೆರೆಯುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣ ಕುಮಾರ್ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ–2026ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಕಾರ್ಕಳದ ಹಿತ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಂ. ರವಿರಾಜ್ ಶೆಟ್ಟಿಯವರು ಮಾತನಾಡಿ, ಆಟ, ಪಾಠ, ಊಟ ಇವೆಲ್ಲದರಲ್ಲಿನ ಒಳ್ಳೆಯ ಅಭ್ಯಾಸಗಳು ಜೀವನೋತ್ಸಾಹವನ್ನು ತರುತ್ತವೆ. ವಿದ್ಯಾರ್ಥಿ ದೆಸೆಯಲ್ಲಿಯೇ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢವಾಗಿರಿಸಿಕೊಂಡವರು ಶೈಕ್ಷಣಿಕವಾಗಿ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಲು ಸಾಧ್ಯ. ಡಾ. ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಮೌಲ್ಯಯುತವಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಬಿಸಿನೆಸ್ ಫೇರ್‌ನಿಂದ ಗಳಿಸಿದ ರೂ. 20,000 ಲಾಭಾಂಶವನ್ನು ಆನೆಕೆರೆ ಸಮೀಪದ ನಿವಾಸಿ, ಅನಾರೋಗ್ಯದಿಂದ ಬಳಲುತ್ತಿರುವ ವಿಘ್ನೇಶ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಸಾಧಕರಿಗೆ ಗೌರವ:
2026ನೇ ಸಾಲಿನಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಸಾಧಕರನ್ನು ಮತ್ತು ಕಾಲೇಜು ಹಂತದಲ್ಲಿ ನಡೆಸಿದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಗುರುತಿಸಿ ಗೌರವಿಸಲಾಯಿತು. ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಪ್ರಥಮ ಪಿಯುಸಿಯ ಬಿ-1 ವಿಭಾಗ ತನ್ನದಾಗಿಸಿಕೊಂಡಿತು.
ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಹಾಗೂ ಶ್ರೀಮತಿ ಉಷಾ ರಾವ್ ಯು., ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ., ಡೀನ್ ಅಕಾಡೆಮಿಕ್ ಡಾ. ಮಿಥುನ್ ಯು., ಡೀನ್ ಸ್ಟೂಡೆಂಟ್ ಅಫೇರ್ಸ್ ಶ್ರೀಮತಿ ಶಕುಂತಳಾ ಎಂ. ಸುವರ್ಣ, ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಸಂಯೋಜಕ ಶ್ರೀ ಸಂದೀಪ್, ವಿದ್ಯಾರ್ಥಿ ನಾಯಕರಾದ ವಿಶ್ವನಾಥ್ ಎಸ್. ಎನ್. ಹಾಗೂ ಗ್ರೀಷ್ಮಾ ಎಸ್. ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರ್ ಸ್ವಾಗತಿಸಿದರು. ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ವಾರ್ಷಿಕ ವರದಿಯನ್ನು ಭೌತಶಾಸ್ತ್ರ ವಿಭಾಗದ ಶರತ್ ಆಚಾರ್ಯ, ಸಾಧಕರ ಪಟ್ಟಿಯನ್ನು ಆಂಗ್ಲಭಾಷಾ ವಿಭಾಗದ ಕು. ದಿವ್ಯ, ಜೀವಶಾಸ್ತ್ರ ವಿಭಾಗದ ಕು. ಸಹನ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ವಾಚಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

























































































