22.9 C
Udupi
Thursday, November 19, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 703

ಭರತೇಶ ಶೆಟ್ಟಿ,ಎಕ್ಕಾರು

ಸಂಚಿಕೆ ೭೦೩ ಮಹಾಭಾರತ

ಬಿರುಗಾಳಿ ಎಷ್ಟು ತೀವ್ರವಾಗಿತ್ತೆಂದರೆ ಮರಗಳಲ್ಲಿದ್ದ ಪಕ್ಷಿಗಳ ಗೂಡುಗಳು ಹಾರಿ ಹೋದವು. ಮರಗಳು ಬೇರು ಸಹಿತ ಧರೆಗುರುಳಿದವು. ಭೂಮಿಯೊಳಗಿದ್ದ ಬೇರು ಕೀಳಲ್ಪಟ್ಟು ಹೊರಬರುವಾಗ ಗುಹೆಗಳು ಕುಸಿದು ಮಲಗಿದ್ದ ಪ್ರಾಣಿಗಳೂ ಹೊರ ನುಸುಳಿ ಕಂಡತ್ತ ಓಡಿ ಹೋಗತೊಡಗಿದವು. ಜಿಂಕೆಗಳು ಹಿಂಡು ಹಿಂಡಾಗಿ ಪ್ರಾಣ ಉಳಿಸಲು ಓಡುತ್ತಿದ್ದವು. ಜಿಂಕೆಗಳ ಕಾಲ ಗೊರಸಿಗೆ ತಾಗಿ ಸಿಡಿದ ಕಲ್ಲುಗಳ ತಾಕಲಾಟದಿಂದ ಬೆಂಕಿಯ ಕಿಡಿ ಸಿಡಿಯಿತು. ಒಣಗಿದ ಬಿದಿರು ತರಗೆಲೆಗಳಲ್ಲಿ ಹೊಗೆಯಾಡಿ ಬೆಂಕಿ ಹತ್ತಿಕೊಂಡಿತು. ನೋಡ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಿಡಿ ಜ್ವಾಲೆಯಾಗಿ ಕಾಡ್ಗಿಚ್ಚಾಗಿ ಹಬ್ಬಿತು. ಗಿಡ, ಮರ, ಬಳ್ಳಿ, ಸರ್ಪ, ಉರಗಗಳೆಲ್ಲವೂ ದಾವಾಗ್ನಿಗೆ ಆಹುತಿಯಾಗಿ ಭಸ್ಮವಾಗತೊಡಗಿದವು. ಹಿರಿದು ಕಿರಿದು ಮೃಗಗಳೆಲ್ಲ ಓಡುತ್ತಿದ್ದರೂ ಸಿಡಿದೆದ್ದು ಹಬ್ಬುತ್ತಿದ್ದ ಜ್ವಾಲೆಯ ಕೆನ್ನಾಲಿಗೆಗೆ ಕರಕಲಾಗಿ ಕಮಟು ವಾಸನೆ ಹಬ್ಬತೊಡಗಿತು. ಪಟಪಟಾರ್ ಶಬ್ಬದಿಂದ ಬಂಡೆಗಳು ಸ್ಪೋಟಗೊಳ್ಳುವ ಭೀಕರ ಶಬ್ದಗಳು ಪ್ರತಿಧ್ವನಿಸಿ ದಶದಿಕ್ಕುಗಳೂ ನಡುಗುವಂತೆ ಭಾಸವಾಗತೊಡಗಿತು. ಹೀಗಾಗುತ್ತಿರಲು ಅತಿವೇಗದಿಂದ ಗಮಿಸುತ್ತಿದ್ದ ಅಗ್ನಿ ಧೃತರಾಷ್ಟ್ರ, ಕುಂತಿ, ಗಾಂಧಾರಿ ಸಂಜಯರು ಸಾಗುತ್ತಿದ್ದ ಕಡೆಗೂ ಆವರಿಸಿತು.

ಸಂಜಯ ಮತ್ತು ಕುಂತಿ ತಮ್ಮನ್ನು ಅನುಸರಿಸಿ ಬರುತ್ತಿದ್ದ ಧೃತರಾಷ್ಟ್ರ ಗಾಂಧಾರಿಯರಿಗೆ ಕಣ್ಣುಗಳಾಗಿದ್ದರು. ಆದರೆ ಅದೆಷ್ಟೊ ದಿನಗಳಿಂದ ನಿರಾಹಾರಿ ಮಿತಾಹಾರಿಗಳಾಗಿದ್ದ ಇವರ್ಯಾರಿಗೂ ಕಾಡುಗಿಚ್ಚಿನಿಂದ ನುಸುಳಿ ಪಾರಾಗಬಲ್ಲಷ್ಟು ಚೈತನ್ಯವಿರಲಿಲ್ಲ. ದುರ್ಬಲವೂ, ಅತಿ ಕೃಶವೂ ಆಗಿದ್ದ ಇವರ್ಯಾರಿಗೂ ಹಿಂಬಾಲಿಸಿ ಬರುತ್ತಿದ್ದ ಬೆಂಕಿಯ ಜ್ವಾಲೆಗಳನ್ನು ಮೀರಿ ಹೊರ ಹೋಗುವ ಶಕ್ತಿ ಇರಲಿಲ್ಲ. ಇದನ್ನು ನೋಡಿ ಅರ್ಥೈಸಿಕೊಂಡ ಸಂಜಯ ಮಹಾರಾಜನಲ್ಲಿ ಹೇಳಿದನಂತೆ “ರಾಜನೇ! ನಾವು ತಕ್ಷಣ ಹಿಂದಕ್ಕೆ ಸಾಗಿ ಗಂಗೆಯ ನೀರಿಗಿಳಿದು ಆಕಡೆಗೆ ಸಾಗಬೇಕು. ಹಾಗೆ ಮಾಡಲಾಗದೆ ಹೋದರೆ ನಾವು ನಾಲ್ವರೂ ದಗ್ಧರಾಗಿ ಹೋಗುವುದರಲ್ಲಿ ಸಂದೇಹವಿಲ್ಲ. ಆದರೆ ನಾವು ನದಿಯ ತಟದಿಂದ ತುಸು ದೂರ ಬಂದಾಗಿದೆ. ಹಿಂದಕ್ಕೆ ಹೋಗಿ ಪ್ರಾಣ ಉಳಿಸಿಕೊಳ್ಳುವ ಸಾಧ್ಯತೆ ಅಸಾಧ್ಯವೆಂದು ಕಾಣುತ್ತಿದೆ. ಆದರೆ ತಪೋವನಕ್ಕೆ ಬಂದ ನಾವೆಲ್ಲರೂ ತಪಸ್ಸಿಗೆ ತೊಡಗಿದವರು. ತಪಸ್ವಿಗಳಾದ ನೀವೆಲ್ಲರೂ ಈ ರೀತಿಯ ದುರಂತಕ್ಕೆ ಬಲಿಯಾಗುವುದು ಸರಿಯೆ ಎಂಬ ಗೊಂದಲ ನನ್ನನ್ನು ಕಾಡುತ್ತಿದೆ. ನನಗೆ ಏನಾದರೂ ವ್ಯಥೆಯಿಲ್ಲ. ನಿಮ್ಮ ಅಂತ್ಯ ಉಚಿತ ಸಾಧನೆಯ ಮಾರ್ಗದಿಂದ ಪ್ರಾಪ್ತವಾಗಬೇಕಿತ್ತು. ಆದರೆ ಈ ಸಮಯ ಅಂತಹ ಯಾವ ಮಾರ್ಗವೂ ತೋರುತ್ತಿಲ್ಲ. ಹಾಗಾಗಿ ಪ್ರಾಜ್ಞರಾದ ನೀವು ಸೂಕ್ತ ಪರಿಹಾರೋಪಾಯ ತೋರಬೇಕು” ಎಂದು ಬೇಡಿಕೊಂಡನಂತೆ.

ಆಗ ಧೃತರಾಷ್ಟ್ರ “ಅಯ್ಯಾ ಸಂಜಯಾ! ನಾವು ನಮ್ಮ ಸ್ವಂತ ಆಸೆಯ ಸ್ವೇಚ್ಚೆಯಿಂದ ಅರಮನೆ ತೊರೆದು ತಪೋವನ ಸೇರಿದವರು. ಇಳಿ ವಯಸ್ಸಿನಲ್ಲಿ ನಾವು ಹೀಗೆ ವಾನಪ್ರಸ್ಥ ಸ್ವೀಕರಿಸುವ ಮೊದಲು ಸಕಲ ರಾಜ ವೈಭೋಗಗಳನ್ನು ಅನುಭವಿಸಿದವರಲ್ಲವೆ? ಯಾವ ಕ್ಷಣ ರಾಜೋಚಿತ ಸಕಲ ಸೌಕರ್ಯಗಳನ್ನು ತೊರೆದು ಬಂದೆವೊ ಆ ಬಳಿಕ ನಮಗೆ ಯಾವ ವಿಧದ ಮರಣ ಪ್ರಾಪ್ತವಾದರೂ ಅಲ್ಲಿ ಉಚಿತಾನುಚಿತದ ವಿವೇಚನೆ ಬಾರದು. ಅದರಲ್ಲೂ ನಾವು ತಪೋ ನಿರತರಾಗಿ ತಪಸ್ವೀ ಜೀವನ ಆಯ್ದುಕೊಂಡವರು. ತಪಸ್ವಿಗಳಾದವರಿಗೆ ಜಲ, ಅಗ್ನಿ, ಮಣ್ಣು, ವಾಯು ಅಥವಾ ನಿರಾಹಾರ (ಉಪವಾಸ) ದಿಂದ ಮರಣ ಪ್ರಾಪ್ತವಾದರೆ ಅದು ಉತ್ತಮ ಗತಿಯನ್ನು ಒದಗಿಸಿ ಕೊಡುತ್ತದೆ ಎಂಬುವುದು ಶಾಸ್ತ್ರ ಖಚಿತ ವಿಚಾರ ಹೀಗಿರುವಾಗ ನಾವು ಚಿಂತಿಸಿ ಭಯಭೀತರಾಗುವ ಅಗತ್ಯವಿಲ್ಲ. ಆದರೆ ಸಂಜಯಾ! ನೀನು ಈಗಲೂ ನನ್ನನ್ನು ರಾಜನೇ ಎಂದು ಸಂಭೋದಿಸಿ ಅದೇ ಭಾವದಿಂದ ಸೇವೆ ಮಾಡುತ್ತಿರುವೆ. ನಿನಗಿದೋ ನನ್ನ ರಾಜಾಜ್ಞೆ. ನೀನು ಅರೆಕ್ಷಣವೂ ತಡಮಾಡದೆ ಇಲ್ಲಿಂದ ದೂರ ಸಾಗಿ ಬದುಕಿಕೋ. ಸಾವಕಾಶ ಮಾಡದೆ, ಪ್ರತಿ ಮಾತನ್ನಾಡದೆ ತೆರಳಲೇ ಬೇಕು” ಎಂದು ಸದುತ್ತರ ನೀಡಿ ಆದೇಶವಿತ್ತರಂತೆ.

ಧೃತರಾಷ್ಟ್ರ ಸಂಜಯನಿಗೆ ಈ ರೀತಿ ಹೇಳಿದ ಬಳಿಕ ಮನಸ್ಸನ್ನು ಏಕಾಗ್ರಗೊಳಿಸಿ ತಾನು ನಿಂತಲ್ಲಿ ತಿರುಗಿ ಪೂರ್ವಾಭಿಮುಖವಾಗಿ ಕುಳಿತು ಕೊಂಡು ಧ್ಯಾನ ನಿರತನಾದನಂತೆ. ಆತನನ್ನು ಅನುಕರಿಸಿ ಕುಂತಿ ಮತ್ತು ಗಾಂಧಾರಿಯರೂ ಹಾಗೆಯೆ ಕುಳಿತು ನಿರ್ಭೀತರಾಗಿ ಏಕಾಗ್ರಚಿತ್ತದಿಂದ ಧ್ಯಾನಮಗ್ನರಾದರಂತೆ.
ಅನ್ಯ ಮಾರ್ಗವಿಲ್ಲದೆ ಸಂಜಯ ಇವರು ಮೂವರಿಗೂ ವಂದಿಸಿದನು. ಮೇಧಾವಿಯಾದ ಸಂಜಯನು ಧೃತರಾಷ್ಟ್ರನ ಮಂತ್ರಿ ಮತ್ತು ಸೇವಕನಾಗಿದ್ದರೂ ಸಾಮಾನ್ಯ ವ್ಯಕ್ತಿಯಲ್ಲ. ಮಹಾಭಾರತ ಯುದ್ಧವನ್ನು ಅರಮನೆಯಲ್ಲಿ ಕುಳಿತು ಕಾಣುತ್ತಾ ಕ್ಷಣ ಕ್ಷಣದ ವಾರ್ತೆಯನ್ನು ಧೃತರಾಷ್ಟ್ರನಿಗೆ ವಿವರಿಸುವ ದಿವ್ಯ ದೃಷ್ಟಿ ಹೊಂದಿದ್ದವನಲ್ಲವೇ? ಭಗವಾನ್ ವ್ಯಾಸರ ಪೂರ್ಣ ಕೃಪೆಗೆ ಪಾತ್ರನಾಗಿ ಕಿರು ವ್ಯಾಸರೆಂದು ಖ್ಯಾತನಾಗಿದ್ದ ಮಹಾತ್ಮ. ಈ ಸಂದರ್ಭ ಅದೇನು ಭವಿಷ್ಯವನ್ನು ಅರಿತುಕೊಂಡನೋ ಏನೋ! ಧೃತರಾಷ್ಟ್ರನನ್ನು ಉದ್ದೇಶಿಸಿ “ಪ್ರಭುವೇ, ಮನಸ್ಸನ್ನು ಆತ್ಮನಲ್ಲಿ ಸಂಯೋಜಿಸಿ ಅನುಸಂಧಾನಗೊಳಿಸಿ ಯೋಗಯುಕ್ತನಾಗು‌. ನಿಯತಿಯ ನಿಯಮದಂತೆ, ಭಗವಂತನ ಸಂಕಲ್ಪದಂತೆ ಎಲ್ಲವೂ ಒಳಿತಾಗಲಿದೆ.” ಎಂದು ನುಡಿದನಂತೆ. ಸಂಜಯನ ಮಾತು ಏಕಾಗ್ರತೆಯಿಂದ ಧ್ಯಾನ ನಿರತನಾಗಿದ್ದ ಈ ಮೂವರ ಸುಪ್ತ ಮನಸ್ಸಿಗೂ ಕೇಳಿಸಿತೋ ಏನೋ! ಅವರೆಲ್ಲರೂ ಇಂದ್ರಿಯ ಸಮೂಹವನ್ನು ನಿಗ್ರಹಿಸಿ ಮನಸ್ಸನ್ನು ಆತ್ಮನಲ್ಲಿ ಲೀನಗೊಳಿಸಿ ಬಾಹ್ಯ ಸ್ಥಿತಿಯ ಪರಿವೆಯನ್ನು ಮರೆತು ತನ್ಮಯರಾದರಂತೆ. ಮುರಿದು ಬಿದ್ದ ಒಣಗಿದ ಮರದ ಬುಡದಂತೆ ಅಚಲರಾಗಿ ಕುಳಿತಿದ್ದಾರೆ. ಹೊರಗೇನು ಆಗುತ್ತಿದೆಯೊ ಅದರ ಸ್ಪರ್ಶ, ಗಂಧ, ಗಾಳಿ ಏನೂ ಇವರ ಅರಿವಿಗೆ ಬಾರದಷ್ಟು ಅಂತರ್ಮುಖಿಗಳಾಗಿದ್ದಾರೆ. ಆಗ…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page