
ಧಾರವಾಡ: ಶಿಕ್ಷಣ ಸಚಿವರ ಹೇರ್ ಸ್ಟೈಲ್ ಸರಿಯಿಲ್ಲ, ಅವರು ಶಿಕ್ಷಣ ಖಾತೆಗೆ ಅರ್ಹರಲ್ಲ ಎಂಬ ವರೂರು ಜೈನ ಮುನಿಗಳ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ನನ್ನ ಹೇರ್ ಸ್ಟೈಲ್ ಸರಿಯಿಲ್ಲ ಎಂದು ಟೀಕಿಸುತ್ತಾರೆ. ಆದರೆ, ನನ್ನ ಅವಧಿಯಲ್ಲಿ ಮಕ್ಕಳು ಶೇ.98.2ರಷ್ಟು ಫಲಿತಾಂಶ ಪಡೆದಿದ್ದಾರೆ. ಈ ಸಾಧನೆಯ ಬಗ್ಗೆಯೂ ಸ್ವಾಮೀಜಿಗಳು ಮಾತನಾಡಲಿ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಶಿಕ್ಷಣ ಇಲಾಖೆಯ ನೇಮಕಾತಿ ಕುರಿತು ಪ್ರತಿಕ್ರಿಯಿಸಿದ ಅವರು, 18 ಸಾವಿರ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ದಿನಾಂಕ ಪ್ರಕಟಿಸುವಂತೆ ಸೂಚಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.






















































































