
ಮೂಡುಬಿದಿರೆ: 2026-27ನೇ ಸಾಲಿನಲ್ಲಿ ನಡೆಯಲಿರುವ ಕಂಬಳಗಳ ಪರಿಷ್ಕೃತ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸನಿಲ್ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಬಿಡುಗಡೆಗೊಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿಯಂತೆ ನ. 7ರಂದು ಪಣಪಿಲದಲ್ಲಿ (ಈಗಾಗಲೇ ನಡೆದಿದೆ), ನ. 14ರಂದು ಸಾಣೂರಿನಲ್ಲಿ, ನ. 21ರಂದು ಕೊಡಂಗೆ ಹಾಗೂ ನ. 28ರಂದು ಕಕ್ಕೆಪದವಿನಲ್ಲಿ ಕಂಬಳ ನಡೆಯಲಿದೆ. ಡಿ. 5ರಂದು ಹೊಕ್ಕಾಡಿಗೋಳಿ, ಡಿ. 12ರಂದು ಬಾರಾಡಿಬೀಡು, ಡಿ. 19ರಂದು ವೇಣೂರು, ಡಿ. 26ರಂದು ಮೂಲ್ಕಿ, ಡಿ. 27ರಂದು ಬಳ್ಳಮಂಜದಲ್ಲಿ ಕಂಬಳ ಆಯೋಜಿಸಲಾಗಿದೆ.
ಜ. 2ರಂದು ಮಂಗಳೂರು, ಜ. 9ರಂದು ಮಿಯ್ಯಾರು, ಜ. 16ರಂದು ನರಿಂಗಾಣ, ಜ. 23ರಂದು ಮೂಡುಬಿದಿರೆ ಹಾಗೂ ಜ. 30ರಂದು ಪುತ್ತೂರಿನಲ್ಲಿ ಕಂಬಳ ನಡೆಯಲಿದೆ. ಫೆ. 6ರಂದು ಐಕಳ, ಫೆ. 13ರಂದು ಜಪ್ಪಿನಮೊಗರು, ಫೆ. 20ರಂದು ಅಡ್ವೆ, ಫೆ. 27ರಂದು ವಾಮಂಜೂರಿನಲ್ಲಿ ಕಂಬಳ ಜರುಗಲಿದೆ.
ಮಾ. 6ರಂದು ಎರ್ಮಾಳು, ಮಾ. 13ರಂದು ಬಂಟ್ವಾಳ, ಮಾ. 20ರಂದು ಬಂಗಾಡಿ, ಮಾ. 27ರಂದು ಉಪ್ಪಿನಂಗಡಿ, ಏ. 3ರಂದು ಗುರುಪುರ, ಏ. 10ರಂದು ಬಳ್ಕುಂಜೆ, ಏ. 17ರಂದು ಹರೇಕಳ, ಏ. 24ರಂದು 80 ಬಡಗಬೆಟ್ಟು ಹಾಗೂ ಮೇ 1ರಂದು ಕಡಂದಲೆಯಲ್ಲಿ ಕಂಬಳ ನಡೆಯಲಿದೆ.
ಪ್ರಮುಖರ ಸಹಮತದೊಂದಿಗೆ ಕೆಲವು ಕಂಬಳಗಳ ದಿನಾಂಕಗಳಲ್ಲಿ ಮಾತ್ರ ಮರುಹೊಂದಾಣಿಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.






















































































