31.2 C
Udupi
Thursday, November 12, 2026
spot_img
spot_img
HomeBlogಹೈಕೋರ್ಟ್ ಪೀಠ ಸ್ಥಾಪನೆ - ನ. 14ರ ಹಕ್ಕೊತ್ತಾಯ ಸಭೆಗೆ ಸರ್ವರ ಬೆಂಬಲವಿರಲಿ,

ಹೈಕೋರ್ಟ್ ಪೀಠ ಸ್ಥಾಪನೆ – ನ. 14ರ ಹಕ್ಕೊತ್ತಾಯ ಸಭೆಗೆ ಸರ್ವರ ಬೆಂಬಲವಿರಲಿ,

ಉಡುಪಿಯಲ್ಲಿ ಪೀಠ ಸ್ಥಾಪನೆಗೆ ಆಗ್ರಹ : ಪ್ರೇಮ್ ಪ್ರಸಾದ್ ಶೆಟ್ಟಿ

ಕರಾವಳಿಗೆ ಹೈಕೋರ್ಟ್ ಪೀಠ ಸ್ಥಾಪನೆ ಬೇಡಿಕೆ ಆಗ್ರಹಿಸಿ- ನವೆಂಬರ್ 14 ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ, ಉಡುಪಿ ಜಿಲ್ಲೆ, ಯು-ಆಕ್ಸ್ ಮತ್ತು ವಕೀಲರ ಸಂಘ ಕಾರ್ಕಳ ನೇತೃತ್ವದಲ್ಲಿ ಹಕ್ಕೊತ್ತಾಯ ಸಭೆಯ ಕುರಿತು ಪತ್ರಿಕಾ ಗೋಷ್ಠಿಯು ನ 11 ರಂದು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆಯಿತು.

ಪತ್ರಿಕಾಗೋಷ್ಠಿಯನ್ನು ಉದ್ದೇಸಿಸಿ ಮಾತನಾಡಿದ ಕರಾವಳಿ ಹೈ ಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರು ವಕೀಲರಾದ ಪ್ರೇಮ್ ಪ್ರಸಾದ್ ಶೆಟ್ಟಿ ಅವರು ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯು ಯಾವುದೇ ರಾಜಕೀಯ ರಹಿತ, ಕೇವಲ ಸಾರ್ವಜನಿಕ ಹಿತಾಸಕ್ತಿಯನ್ನು ಮುನ್ನೆಲೆಯಲ್ಲಿಟ್ಟುಕೊಂಡು ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಜೋಡಿಸಿ ನಡೆಸುತ್ತಿರುವ ಪಕ್ಷಾತೀತ ಹೋರಾಟವಾಗಿದೆ ಎಂದರು.

“ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಈ ಇಡೀ ಪ್ರದೇಶದ ಬದಲಾವಣೆಗೆ ಪ್ರಮುಖ ದಾರಿದೀಪವಾಗಲಿದೆ. ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆಯುತ್ತಿರುವ ಸಾವಿರಾರು ಕಕ್ಷಿದಾರರಿಗೆ ಹಾಗೂ ನಮ್ಮ ಪ್ರದೇಶದ ಸುಮಾರು 80 ಲಕ್ಷ ಜನರಿಗೆ ಇದು ಅತ್ಯಂತ ದೊಡ್ಡ ಮಟ್ಟದ ಅನುಕೂಲ ಹಾಗೂ ಆಸರೆಯಾಗಲಿದೆ ಎಂದರು.

ಸಾರ್ವಜನಿಕರು ಹಾಗೂ ಸಣ್ಣ ಕುಟುಂಬಗಳ ಅಮೂಲ್ಯ ಸಮಯ, ಶ್ರಮ ಮತ್ತು ಭಾರಿ ಪ್ರಮಾಣದ ಹಣಕಾಸಿನ ವೆಚ್ಚವನ್ನು ಇದು ಉಳಿಸಲಿದೆ ಎಂದರು.

ಪ್ರಾದೇಶಿಕವಾಗಿ ಹೈಕೋರ್ಟ್ ಪೀಠ ಕಾರ್ಯಾಚರಿಸುವುದರಿಂದ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಯಂತ್ರವು ಇನ್ನಷ್ಟು ಜಾಗರೂಕತೆಯಿಂದ ಮತ್ತು ಚುರುಕಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.ಈ ನಾಡಿನ ಮತ್ತು ಜಿಲ್ಲೆಯ ಸುದೀರ್ಘ ಹಿತದೃಷ್ಟಿಯಿಂದ ಪ್ರತಿಯೊಂದು ಪಕ್ಷ. ವರ್ಗ, ಕ್ಷೇತ್ರ ಹಾಗೂ ಸಮಾಜದ ಎಲ್ಲಾ ಸ್ತರದ ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ ನೀಡಬೇಕಾಗಿ” ವಿನಂತಿಸಿಕೊಂಡರು.

ಕರಾವಳಿ ಭಾಗದ ಜನರ ಬಹುದಿನಗಳ ಈ ಬೇಡಿಕೆಯನ್ನು ಪರಿಶೀಲಿಸಲು ಮಾನ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೆಪ್ಟೆಂಬರ್ 29, 2026 ರಂದು ತ್ರಿಸದಸ್ಯ ನ್ಯಾಯಾಧೀಶರ ಸಮಿತಿ (ಮಾನ್ಯ ನ್ಯಾಯಮೂರ್ತಿ ಅನು ಶಿವರಾಮನ್, ಮಾನ್ಯ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಹಾಗೂ ಮಾನ್ಯ ನ್ಯಾಯಮೂರ್ತಿ ಮೊಹಮ್ಮದ್ ನವಾಜ್) ಯನ್ನು ರಚಿಸಿರುವುದನ್ನು ಹೋರಾಟ ಸಮಿತಿಯು ಆತ್ಮೀಯವಾಗಿ ಸ್ವಾಗತಿಸುತ್ತದೆ.ಉಡುಪಿ ಜಿಲ್ಲೆಯು ಮೂರೂ ಕರಾವಳಿ ಜಿಲ್ಲೆಗಳಿಗೆ (ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ) ಕೇಂದ್ರ ಬಿಂದುವಾಗಿದ್ದು, ನೆರೆಯ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ತಾಲೂಕುಗಳಿಗೂ ಅತ್ಯಂತ ಸಮೀಪದಲ್ಲಿದೆ. ಆದ್ದರಿಂದ ಉದ್ದೇಶಿತ ಸಂಚಾರಿ/ಶಾಶ್ವತ ಹೈಕೋರ್ಟ್ ಪೀಠವನ್ನು ಉಡುಪಿ ಜಿಲ್ಲೆಯಲ್ಲೇ ಸ್ಥಾಪಿಸಬೇಕೆಂದು ಸಮಿತಿಯು ಬಲವಾಗಿ ಆಗ್ರಹಿಸುತ್ತದೆ ಎಂದರು.

ಈ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ಹಾಗೂ ಸಾರ್ವಜನಿಕ ಬೆಂಬಲವನ್ನು ಕ್ರೋಡೀಕರಿಸಲು ಕಾರ್ಕಳದಲ್ಲಿ ಬೃಹತ್ ಹಕ್ಕೊತ್ತಾಯ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ತಾಲೂಕು ವಕೀಲರಾದ ಸಂಘದ ಅಧ್ಯಕ್ಷರಾದ ಪ್ರಕಾಶ್ ಆಚಾರ್,ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page