
ಕಾರ್ಕಳ: ಸಾರ್ವಜನಿಕ ಶ್ರೀ ಸತ್ಯಸಾರಮಣಿ ಹಲೇರ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿ (ರಿ.), ಇಂದಿರಾನಗರ, ಕರಿಯಕಲ್ಲು, ಸಾಣೂರು ಇದರ ಭಜನಾ ಸದಸ್ಯರ ನೇತೃತ್ವದಲ್ಲಿ ನವೆಂಬರ್ 8ರಂದು ಭಾನುವಾರ ಕ್ರೀಡಾಕೂಟವು ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಂಡ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ನೆಲ್ಲಿ ನಿಟ್ಟೆಯ ಆಡಳಿತ ಮೊಕ್ತೇಸರರಾದ ಸುನಿಲ್ ಕೆ. ಆರ್., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ಉದ್ಯಮಿಗಳಾದ ಅರುಣ್ ಕುಮಾರ್ ನಿಟ್ಟೆ, ಶೈಲೇಶ್ ಸಾಣೂರು, ಪುನೀತ್ ಸಾಣೂರು, ಕ್ಷೇತ್ರದ ಪ್ರಮುಖರಾದ ಸುಧಾಕರ್ ಸಾಲಿಯಾನ್, ರಾಜೇಶ್ ಶೆಟ್ಟಿ ಹಾಗೂ ಮಹಿಳಾ ಅಧ್ಯಕ್ಷರಾದ ಬೇಬಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕ್ಷೇತ್ರದ ಭಜನಾ ಸದಸ್ಯರ ನೇತೃತ್ವದಲ್ಲಿ ನಡೆದ ಈ ಕ್ರೀಡಾಕೂಟವು ಮಕ್ಕಳಲ್ಲಿ ಕ್ರೀಡಾಸಕ್ತಿ, ಉತ್ಸಾಹ ಹಾಗೂ ಪರಸ್ಪರ ಬಾಂಧವ್ಯವನ್ನು ಬೆಳೆಸುವ ಉದ್ದೇಶವನ್ನು ಹೊಂದಿತ್ತು.ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಮಕ್ಕಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಮೆರುಗು ನೀಡಿದರು.ಕ್ಷೇತ್ರ ಸಮಿತಿಯ ಸದಸ್ಯರು, ಭಜನಾ ಸದಸ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು






















































































