
ವಿದ್ಯಾಮಾತಾ ಅಕಾಡಮಿ ಕಾರ್ಕಳದಲ್ಲಿ ಬೆಂಗಳೂರು ಮೊಬೈಲ್ ಸಂಸ್ಥೆಯ ಉಚಿತ ಸಂದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ನೇರವಾಗಿ ಕಂಪನಿ MD ಅವರು ಭಾಗವಹಿಸಿದ್ದು ಅವರೇ ನೇರವಾಗಿ ವಿವಿಧ ಮೂಲೆಗಳಿಂದ ಬಂದಿರುವಂತೆ ಯುವತಿಯರಿಗೆ ಸಂದರ್ಶನವನ್ನು ಮಾಡಿದರು. ಕಾರ್ಕಳ, ಉಡುಪಿ, ಹೆಬ್ರಿ ಕಾರವಾರ, ಗದಗ, ಶಿವಮೊಗ್ಗ ಹೀಗೆ ಬೇರೆ ಬೇರೆ ಕಡೆಯ 86 ಯುವತಿಯರು ಭಾಗವಹಿಸಿದ್ದು ಉದ್ಯೋಗ ಅವಕಾಶ ಇರುವ ಆಯ್ಕೆಯಾದ ಅಂತ ಯುವತಿಯರಿಗೆ ಕೆಲಸವನ್ನು ನೀಡುವಂತ ಭರವಸೆಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಕಾರ್ಕಳ ವಿದ್ಯಾಮಾತಾ ಡೈರೆಕ್ಟರ್ ಶ್ರೀಮತಿ ರಮಿತಾಶೈಲೇಂದ್ರ, ವಿದ್ಯಾಮಾತಾ ಫೌಂಡರ್ ಭಾಗೇಶ್ ರೈ ಉಪಸ್ಥಿತರಿದ್ದರು.