
ಮಂಗಳೂರು : ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ವಾಹನಗಳ ಓಡಾಟದ ಮಧ್ಯೆಯೇ ನಡುರಸ್ತೆಯಲ್ಲೇ ಯುವಕರು ಕುಳಿತು ನಮಾಜ್ ಮಾಡಿದ ಘಟನೆ ಸಂಭವಿಸಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.
ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಂಕನಾಡಿ ರಸ್ತೆಗೆ ಹೊಂದಿಕೊಂಡಂತಿರುವ ಮಸೀದಿ ಮುಂಭಾಗದ ರಸ್ತೆಗೆ ಕುಳಿತು ಯುವಕರು ನಮಾಜ್ ಮಾಡುತ್ತಿರುವ ದೃಶ್ಯವನ್ನ ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಯುವಕರು ನಡುರಸ್ತೆಯಲ್ಲೇ ನಮಾಜ್‌ಗೆ ಕುಳಿತಿರುವುದರಿಂದ ವಾಹನ ಸವಾರರಿಗೆ ಮುಂದೆ ಚಲಿಸಲು ತೊಂದರೆಯಾಗಿದ್ದು ಹೀಗಾಗಿ ಯೂಟರ್ನ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು ನಮಾಜ್ ಮಾಡಲೆಂದೇ ಮಸೀದಿ ಇರುವುದು ಆದರೆ ಮಸೀದಿ ಬಿಟ್ಟು ನಡುರಸ್ತೆಗೆ ಕುಳಿತು ನಮಾಜ್ ಮಾಡಿದರೆ ವಾಹನಗಳು ಸಂಚರಿಸುವುದು ಹೇಗೆಂದು ಪ್ರಶ್ನಿಸಿದ್ದಾರೆ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ