26.1 C
Udupi
Tuesday, November 3, 2026
spot_img
spot_img
HomeBlogಮೊಸರು ಬೆಲೆ ಏರಿಕೆಗೆ ಸಾರ್ವಜನಿಕರ ಆಕ್ರೋಶ;

ಮೊಸರು ಬೆಲೆ ಏರಿಕೆಗೆ ಸಾರ್ವಜನಿಕರ ಆಕ್ರೋಶ;

ಕೊನೆಗೂ 2 ರೂ. ಕಡಿತಕ್ಕೆ ಸಿಎಂ ಡಿಕೆಶಿ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಿಸಲಾಗಿದ್ದು, ಈ ಪೈಕಿ 7 ರೂ. ರೈತರಿಗೆ ಹಾಗೂ 1 ರೂ. ಕೆಎಂಎಫ್‌ಗೆ ನೀಡಲಾಗುತ್ತಿದೆ. ಆದರೆ ಮೊಸರಿನ ದರವನ್ನು ಲೀಟರ್‌ಗೆ 14 ರೂ. ಹೆಚ್ಚಿಸಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೆಚ್ಚುವರಿ ಹಣ ರೈತರಿಗೆ ತಲುಪುತ್ತದೆಯೇ ಎಂಬ ಪ್ರಶ್ನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಮೊಸರಿನ ದರದಲ್ಲಿ 2 ರೂ. ಕಡಿತಗೊಳಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಹಾಲಿನ ದರ ಏರಿಕೆಯ 8 ರೂ. ಪೈಕಿ 7 ರೂ. ರೈತರಿಗೆ ನೀಡಲಾಗುತ್ತಿದೆ. ಮೊಸರಿನ ಬೆಲೆಯನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಲೀಟರ್‌ಗೆ ಒಂದೆರಡು ರೂಪಾಯಿ ಇಳಿಕೆ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ನೀರಿನ ಬಾಟಲಿ ಬೆಲೆ ಏರಿಕೆಯಾದಾಗ ಯಾರೂ ಪ್ರಶ್ನಿಸಲಿಲ್ಲ. ಆ ಹಣ ಕೇಂದ್ರ ಸರ್ಕಾರಕ್ಕೆ ಹೋಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಮೊಸರಿನ ದರದಲ್ಲಿ 2 ರೂ. ಕಡಿತಗೊಳಿಸುವುದಾಗಿ ಸ್ಪಷ್ಟಪಡಿಸಿದರು. ಇದರೊಂದಿಗೆ ಲೀಟರ್ ಮೊಸರಿನ ದರ ಏರಿಕೆಯನ್ನು 14 ರೂ.ನಿಂದ 12 ರೂ.ಗೆ ಇಳಿಸಲಾಗುತ್ತಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page