30.1 C
Udupi
Wednesday, October 28, 2026
spot_img
spot_img
HomeBlogವಿದುರ ನೀತಿ ರಾಜಕಾರಣಿಗಳಿಗೆ ಮಾದರಿ : ಡಾ. ವಿನಾಯಕ ಭಟ್ ಗಾಳಿಮನೆ

ವಿದುರ ನೀತಿ ರಾಜಕಾರಣಿಗಳಿಗೆ ಮಾದರಿ : ಡಾ. ವಿನಾಯಕ ಭಟ್ ಗಾಳಿಮನೆ

ನಿಷ್ಠುರವಾದಿಯಾಗಿ ಓಲೈಕೆ ರಾಜಕಾರಣ ಮಾಡದೆ, ಸ್ವಾಭಿಮಾನವನ್ನು ಪಣಕ್ಕಿಟ್ಟು ಆತ್ಮಾಭಿಮಾನಕ್ಕೆ ಭಂಗ ಬಂದಾಗ ಮಂತ್ರಿ ಪದವಿಯನ್ನೇ ತೊರೆದ ವಿದುರನನ್ನು ಮಂತ್ರಿ ಪದವಿಗೆ ಭಾಷ್ಯ ಬರೆದವನು ಎಂದು ವರ್ಣಿಸಿದ್ದಾನೆ ಶ್ರೀಕೃಷ್ಣ. ವಿದುರನು ಧೃತರಾಷ್ಟ್ರನಿಗೆ ಉಪದೇಶಿಸಿದ ಮಾತುಗಳು ರಾಜತಾಂತ್ರಿಕ ನೆಲೆಯಲ್ಲಿ ಬಹಳ ಬೆಲೆಬಾಳುವ ಮಾತುಗಳಾಗಿದ್ದು ‘ವಿದುರ ನೀತಿ’ಯೆಂದೇ ಪ್ರಸಿದ್ಧವಾಗಿರುವ ಈ ಉಪದೇಶಗಳು ಸರ್ವ ಕಾಲದ ರಾಜಕಾರಣಿಗಳು ಸಲ್ಲುವ ಮಾತುಗಳಾಗಿವೆ ಎಂಬುದಾಗಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ದಶಮ ಸೋಪಾನದಲ್ಲಿ ಅವರು ‘ಉದ್ಯೋಗ ಪರ್ವ, ಕುರುಕ್ಷೇತ್ರ ಪರ್ವ’ ಎಂಬ ಕುರಿತಾಗಿ ಅಕ್ಟೋಬರ್ ೨೪ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿಂತೆಯಲ್ಲಿದ್ದ ಧೃತರಾಷ್ಟ್ರನಿಗೆ‌ ವಿದುರನ ಮಾತುಗಳು ಒಪ್ಪಿತವಾದರೂ ಮಮಕಾರವನ್ನು ತ್ಯಜಿಸುವ ಅಧ್ಯಾತ್ಮಿಕ ಮಾರ್ಗವನ್ನು ಆತನಿಗೆ ಸನತ್ ಸುಜಾತರು ಬೋಧಿಸಿದರೂ ಮಕ್ಕಳ ಮೇಲಿನ ಮಮಕಾರ ಆತನಿಗೆ ಯಾರ ಮಾತನ್ನೂ ಕೇಳದಂತೆ ಮಾಡಿತು. ನಂತರ ಯುದ್ಧವನ್ನೇ ಆಯ್ಕೆ ಮಾಡಿಕೊಂಡಿದ್ದರಿಂದ ಯುದ್ಧ ಅನಿವಾರ್ಯವಾಗುವಂತಾಯಿತು ಅಂದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಮತ್ತು ಏರ್ ವೈಸ್ ಮಾರ್ಷಲ್ ರಮೇಶ್‌ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶಾರ್ವರಿ ಶ್ಯಾನುಭಾಗ್ ಪ್ರಾರ್ಥಿಸಿದರು. ಶ್ರೀಮತಿ ಸುಲೋಚನಾ ಬಿ.ವಿ.ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page