
ನೇತಾಜಿ ಫ್ರೆಂಡ್ಸ್ ಮುದ್ರಾಡಿ ಇದರ ವತಿಯಿಂದ ಆರ್ಥಿಕವಾಗಿ ಹಲವಾರು ಅವಶ್ಯಕತೆಗಳ ಆಸರೆಯಲ್ಲಿದ್ದ ನೆಲ್ಲಿಕಟ್ಟೆ ಚೆನ್ನಯ್ಯ ಪೂಜಾರಿ ಇವರ ಮನೆಗೆ ನೀರಿನ ಟ್ಯಾಂಕಿ,ನಳ್ಳಿ ನೀರಿನ ಪೈಪ್ ಅಳವಡಿಕೆ,ಮನೆಯ ವಿದ್ಯುತ್ ಶಕ್ತಿಗೆ ಸಂಪರ್ಕಕ್ಕೆ ಸಂಬಂಧ ಪಟ್ಟ ಪರಿಕರಗಳ ಅಳವಡಿಕೆ ಮಾಡಿ ನೆರವಿನ ಹಸ್ತ ಚಾಚಲಾಯಿತು.
ಈ ಸಂದರ್ಭದಲ್ಲಿ ನೇತಾಜಿ ಫ್ರೆಂಡ್ಸ್ ಇದರ ಗೌರವ ಅಧ್ಯಕರಾದ ಕರುಣಾಕರ ಶೆಟ್ಟಿ ಗಾಣದ ಮನೆ, ಸಂತೋಷ್ ಪೂಜಾರಿ, ಕಾರ್ಯದರ್ಶಿಗಳಾದ ವಿಶುಕುಮಾರ್ ಉಪ್ಪಳ,ಸದಸ್ಯರಾದ ಪ್ರಶಾಂತ್ ಪೈ ಮುದ್ರಾಡಿ,ಪ್ರಜ್ವಲ್ ಬಲ್ಲಾಡಿ,ಶಂಕರ್ ಸೇರಿಗಾರ್, ಪ್ರವೀಣ್ ಪೂಜಾರಿ ಬಲ್ಲಾಡಿ, ಸೂರಜ್ ಶೆಟ್ಟಿ, ಆಶಿಕ್ ಶೆಟ್ಟಿ ಭಕ್ರೆ,ಸತೀಶ್ ಪೂಜಾರಿ ಜನನಿ ಮತ್ತು ಈ ಕಾರ್ಯಕ್ರಮದ ಗುತ್ತಿಗೆ ಜವಾಬ್ದಾರಿಯನ್ನು ವಹಿಸಿಕೊಂಡ ಎಲೆಕ್ಟ್ರಿಕಲ್ ಗುತ್ತಿಗೆದಾರರಾದ ಸುದೀಪ್ ಶೆಟ್ಟಿ ಮಾತೃಶ್ರೀ ಎಲೆಕ್ಟ್ರಾನಿಕ್ಸ್ ಮುದ್ರಾಡಿ ಇವರು ಉಪಸ್ಥಿತರಿದ್ದರು.