ರಾಜ್ಯ ಮಟ್ಟಕ್ಕೆ ನಿಟ್ಟೆಯ 9 ಮಂದಿ ವಿದ್ಯಾರ್ಥಿನಿಯರು ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲೆ ಹಾಗೂ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾನಗರ ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕಾರ್ಕಳ ತಾಲೂಕು ತಂಡವನ್ನು ಡಾ. ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜು, ನಿಟ್ಟೆಯ ವಿದ್ಯಾರ್ಥಿನಿಯರು ಪ್ರತಿನಿಧಿಸಿದ್ದರು. ತಂಡದ ನಾಯಕಿ ಸ್ಮೃತಿ ಕೆ. ಶೆಟ್ಟಿ, ಅತ್ಯುತ್ತಮ ಸ್ಟ್ರೈಕರ್ ಕ್ಲೆರಾ ಭೀಮಣ್ಣನವರ್ ಹಾಗೂ ಅತ್ಯುತ್ತಮ ಫುಟ್ಬಾಲ್ ರಕ್ಷಕ ಪ್ರಶಸ್ತಿ ಪಡೆದ ಪ್ರತಿಭಾವತಿ ಹೊಳೆಮ್ಮನವರ್ ಸೇರಿದಂತೆ ಅವಿನ್ಯಾ ಶೆಟ್ಟಿ, ಸುಜೀಕ್ಷಾ, ಲೂರ್ದ್ ಮೇರಿ ತುಮಕಣ್ಣನವರ್, ಅಶ್ವಿನಿ ಹೂಗಾಡಿ, ಮಂಜುಳಾ ದೇಸಾಯಿ ಹಾಗೂ ಶಕುಂತಲಾ ಮೇಲಿನಮನಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸಾಧಕ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.























