27.2 C
Udupi
Friday, March 14, 2025
spot_img
spot_img
HomeBlogಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ಗಡಿ ಭಾಗದಲ್ಲಿ ಬೀದಿನಾಯಿಗಳ ಕಳ್ಳಸಾಗಣೆ : 1 ನಾಯಿಗೆ ಸಾವಿರ,...

ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ಗಡಿ ಭಾಗದಲ್ಲಿ ಬೀದಿನಾಯಿಗಳ ಕಳ್ಳಸಾಗಣೆ : 1 ನಾಯಿಗೆ ಸಾವಿರ, ಹಿಡಿದವರಿಗೆ 50 ರೂಪಾಯಿ

ನವದೆಹಲಿ: ಈಶಾನ್ಯ ರಾಜ್ಯಗಳ ಗಡಿ ಭಾಗಗಳಲ್ಲಿ ಅಂದರೆ ಅಸ್ಸಾಂನ ಬರಾಕ್‌, ಕಣಿವೆ ಪ್ರದೇಶದಲ್ಲಿ ಬೀದಿನಾಯಿಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ನಾಯಿ ಮಾಂಸಕ್ಕಾಗಿ ಅಧಿಕ ಪ್ರಮಾಣದಲ್ಲಿ ಬೀದಿನಾಯಿಗಳ ಕಳ್ಳಸಾಗಣೆ ಮಾಡಲಾಗುತ್ತದೆ. ವಾಸ್ತವವಾಗಿ, ಈಶಾನ್ಯದ ಕೆಲವು ಪ್ರದೇಶಗಳಲ್ಲಿ ನಾಯಿ ಮಾಂಸವನ್ನು ತಿನ್ನಲಾಗುತ್ತದೆ ಮತ್ತು ವಿಶೇಷವಾಗಿ ಮಿಜೋರಾಂನಲ್ಲಿ ನಾಯಿ ಮಾಂಸದ ಬೆಲೆ ತುಂಬಾ ಹೆಚ್ಚು. ಇದರಿಂದ ಕೆಲವರು ನಾಯಿ ಕಳ್ಳಸಾಗಣೆಯನ್ನು ಹಣ ಸಂಪಾದನೆಯ ಮಾರ್ಗವನ್ನಾಗಿಸಿಕೊಂಡಿದ್ದು ಈಶಾನ್ಯದ ರಾಜ್ಯಗಳಲ್ಲಿ ನಾಯಿಯನ್ನು ಹಿಡಿಯುವವರಿಗೆ 1 ನಾಯಿಗೆ 50 ರೂಪಾಯಿಯಂತೆ ನೀಡಲಾಗುತ್ತದೆ. ಇದೇ ನಾಯಿಯನ್ನು ಮಾರುಕಟ್ಟೆಯಲ್ಲಿ 1 ಸಾವಿರದಿಂದ 2 ಸಾವಿರ ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ.

ನಾಯಿ ಮಾಂಸ ಭಕ್ಷಣೆ ಅವ್ಯಾಹತವಾಗಿ ನಡೆಯುವ ಕಾರಣಕ್ಕೆ ತೀರಾ ಇತ್ತೀಚೆಗೆ ನಾಗಾಲ್ಯಾಂಡ್‌ ರಾಜ್ಯವು ನಾಯಿ ಮಾಂಸ ಭಕ್ಷಣೆಯನ್ನು ನಿಷೇಧ ಮಾಡಿತ್ತು. ಹಾಗಿದ್ದರೂ, ಮಿಜೋರಾಂ ರಾಜ್ಯ ಹಾಗೂ ಅಸ್ಸಾಂ-ಮಿಜೋರಾಂನ ಗಡಿ ಭಾಗದಲ್ಲಿ ನಾಯಿ ಮಾಂಸಕ್ಕೆ ಅಪಾರ ಬೇಡಿಕೆಯಿದೆ.

ಈ ನಾಯಿಗಳ ಕಳ್ಳಸಾಗಣೆಗಾಗಿ ಮೊದಲು ಅಸ್ಸಾಂನ ನಗರಗಳ ಬೀದಿಗಳಲ್ಲಿ ತಿರುಗಾಡುವ ಬೀದಿನಾಯಿಗಳನ್ನು ಹಿಡಿದು ವಾಹನಗಳಲ್ಲಿ ತುಂಬಿಸಿ ನಂತರ ರಹಸ್ಯವಾಗಿ ಮಿಜೋರಾಂಗೆ ಕೊಂಡೊಯ್ದು ಮಾರಾಟ ಮಾಡಲಾಗುತ್ತದೆ.

ಹಲವು ವರ್ಷಗಳಿಂದ ಈಶಾನ್ಯ ಭಾಗದಲ್ಲಿ ಇಂತಹ ಗ್ಯಾಂಗ್‌ಗಳು ಸಕ್ರಿಯವಾಗಿವೆ ಎಂದು ಸ್ಥಳೀಯರು ಹೇಳುತ್ತಿದ್ದು ನಾಯಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ತಂಡ ವಿಚಾರಣೆ ನಡೆಸುತ್ತಿದೆ. ಡಜನ್‌ಗಟ್ಟಲೆ ನಾಯಿಗಳನ್ನು ಮಿಜೋರಾಂಗೆ ಕರೆದೊಯ್ಯುತ್ತಿರುವ ವಿಡಿಯೋ ಕೂಡ ಹೊರಬಿದ್ದಿದ್ದು, ಅದರಲ್ಲಿ ನಾಯಿಗಳನ್ನು ಗೋಣಿಚೀಲದಲ್ಲಿ ಕಟ್ಟಲಾಗಿದ್ದ ಮುಖದ ಭಾಗವನ್ನು ಮಾತ್ರ ಹೊರಗೆ ಬಿಡಲಾಗಿದೆ. ಇದೀಗ ಬಂಧಿತ ಸ್ಮಗ್ಲರ್‌ಗಳ ಉಳಿದ ಸಹಚರರಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page