
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಟಿ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನ ಕಾರ್ಕಳ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂರುರು ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಐಶ್ವರ್ಯ ಪೈ ಅವರು ಭಗವದ್ಗೀತೆಯಲ್ಲಿ ಪ್ರಥಮ ಸ್ಥಾನ ಮತ್ತು ಭಕ್ತಿ ಗೀತೆಯಲ್ಲಿ ತೃತೀಯ. ಮಾನ್ವಿ ಜಿ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ, ಮಾನ್ವಿ ದೇವಾಡಿಗ ಗಣೇಶನ ಚಿತ್ರ ರಚನೆಯಲ್ಲಿ ಪ್ರಥಮ, ರಂಗೋಲಿಯಲ್ಲಿ ದ್ವಿತೀಯ, ಶಿಶಿರಾ ಕಾರಂತ್ ಭಗವದ್ಗೀತೆ ಕಂಠಪಾಠ ಪ್ರಥಮ, ಸಿಯಾ ಶೆಟ್ಟಿ ಭಕ್ತಿಗೀತೆ ಮತ್ತು ಭಾಷಣದಲ್ಲಿ ಪ್ರಥಮ, ಆನ್ಯ ಶೆಟ್ಟಿ ಭಕ್ತಿ ಗೀತೆ ಮತ್ತು ದೇಶಭಕ್ತಿ ಗೀತೆಗಳಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ದೈಹಿಕ ಶಿಕ್ಷಕರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.































































































































