
ದಿನಾಂಕ 19-09-2026ರಂದು ಕೆ.ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಢಶಾಲೆ, ಪೆರ್ವಾಜೆ,
ಕಾರ್ಕಳ ಇಲ್ಲಿ ನಡೆದಿರುವ “72ನೇ ವನ್ಯಜೀವಿ ಸಪ್ತಾಹ – 2026” ಆಚರಣೆಯ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆ,
ಕಾರ್ಕಳ ವನ್ಯಜೀವಿ ವಲಯ, ಕಾರ್ಕಳ ವತಿಯಂದ ನಡೆಸಲಾದ ವಲಯ ಮಟ್ಟದ “ವನ್ಯ ಪ್ರಾಣಿಗಳನ್ನು
ಗುರುತಿಸುವ ಸ್ಪರ್ಧೆ”ಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ತನುಷ್ ಪಿ ಆಚಾರ್ಯ ಪ್ರಥಮ ಸ್ಥಾನ
ಪಡೆದಿರುತ್ತಾರೆ. ಇವರು ಕಡ್ತಲದ ಪಾಂಡುರಂಗ ಆಚಾರ್ಯ ಹಾಗೂ ಸರಸ್ವತಿ ಎಂ ಎಸ್ ದಂಪತಿಗಳ
ಸುಪುತ್ರನಾಗಿರುತ್ತಾನೆ. ಸಾಧಕ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿರುತ್ತಾರೆ.































































































































