
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ಈ ವೇಳೆ ‘ನಮ್ಮ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡಿದೆ ಎಂಬುದು ಶುದ್ಧ ಸುಳ್ಳು. ನನ್ನ ಹಿಂದಿನ ಆಡಳಿತದಲ್ಲಾಗಲಿ, ಈಗಿನ ಆಡಳಿದಲ್ಲಾಗಲಿ ನಾನು ಎಂದಿಗೂ ಅಂತಹ ಕೆಲಸ ಮಾಡಿಲ್ಲ ಮಾಡುವುದೂ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವ ಮೊದಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ ಎಂಬ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ‘ಆರ್.ಅಶೋಕ್ ಜತೆ ಬಹುಶಃ ಪ್ರಜ್ವಲ್ ರೇವಣ್ಣ ಮಾತನಾಡಿರಬಹುದು. ಕೇಂದ್ರ ಸರ್ಕಾರದ ಜತೆ ಅವರು ಭಾಗಿದಾರರು (ಪಾರ್ಟ್ನರ್) ಅಲ್ಲವೇ? ಹೀಗಾಗಿ ರೇವಣ್ಣ ಅಶೋಕ್ ಜತೆ ಮಾತನಾಡಿರಬಹುದು ಎಂದು ತಿರುಗೇಟು ನೀಡಿದರು.