ಬೆಲೆ ಎಷ್ಟು? ಹೊಸ ಫೀಚರ್ಸ್‌ಗಳೇನು?

ಆ್ಯಪಲ್ ತನ್ನ ‘Surprise and Shine’ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಹಿಂದಿನ ಐಫೋನ್ 17 ಪ್ರೊ ಸರಣಿಗೆ ಹೋಲಿಸಿದರೆ ಪ್ರೊಸೆಸರ್, ಕ್ಯಾಮೆರಾ, ಮೋಡೆಮ್ ಹಾಗೂ ಬ್ಯಾಟರಿ ವಿಭಾಗಗಳಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಎರಡೂ ಮಾದರಿಗಳಿಗೆ ಹೊಸ A20 Pro ಚಿಪ್ ಮತ್ತು ಆ್ಯಪಲ್‌ನ C2 ಮೋಡೆಮ್ ನೀಡಲಾಗಿದೆ.
ಭಾರತದಲ್ಲಿ ಬೆಲೆ ಎಷ್ಟು?
ಭಾರತದಲ್ಲಿ ಐಫೋನ್ 18 ಪ್ರೊ 256GB ಮಾದರಿಯ ಆರಂಭಿಕ ಬೆಲೆ ₹1,64,900 ಆಗಿದೆ. 18 ಪ್ರೊ ಮ್ಯಾಕ್ಸ್ 256GB ಆವೃತ್ತಿಗೆ ₹1,79,900 ನಿಗದಿಪಡಿಸಲಾಗಿದೆ. 512GB, 1TB ಮತ್ತು 2TB ಸ್ಟೋರೇಜ್ ಆಯ್ಕೆಗಳೂ ಲಭ್ಯವಿವೆ.
ಬ್ಲ್ಯಾಕ್, ಸಿಲ್ವರ್, ಗ್ಲೇಶಿಯರ್ ಹಾಗೂ ಹೊಸ ಬರ್ಗಂಡಿ ಬಣ್ಣಗಳಲ್ಲಿ ಫೋನ್‌ಗಳು ಸಿಗಲಿವೆ. ಸೆಪ್ಟೆಂಬರ್ 12ರಿಂದ ಪ್ರೀ-ಆರ್ಡರ್ ಆರಂಭವಾಗಲಿದ್ದು, ಸೆಪ್ಟೆಂಬರ್ 18ರಿಂದ ಮಾರಾಟಕ್ಕೆ ಬರಲಿವೆ.
ಡಿಸ್‌ಪ್ಲೇ ಹೇಗಿದೆ?
ಐಫೋನ್ 18 ಪ್ರೊ 6.3 ಇಂಚಿನ ಹಾಗೂ ಪ್ರೊ ಮ್ಯಾಕ್ಸ್ 6.9 ಇಂಚಿನ Super Retina XDR OLED ಡಿಸ್‌ಪ್ಲೇ ಹೊಂದಿವೆ. ProMotion ಮತ್ತು Always-On Display ಸೌಲಭ್ಯಗಳೂ ಇವೆ. ಅಲ್ಯೂಮಿನಿಯಂ ಯುನಿಬಾಡಿ ವಿನ್ಯಾಸದೊಂದಿಗೆ Action Button ಮತ್ತು Camera Control ಮುಂದುವರಿಸಲಾಗಿದೆ.
A20 Pro ಚಿಪ್ ವಿಶೇಷತೆ
ಹೊಸ A20 Pro ಚಿಪ್ 2nm ತಂತ್ರಜ್ಞಾನದಲ್ಲಿ ನಿರ್ಮಾಣವಾಗಿದ್ದು, 6-ಕೋರ್ CPU, 7-ಕೋರ್ GPU ಮತ್ತು 16-ಕೋರ್ Neural Engine ಹೊಂದಿದೆ. A19 Proಗೆ ಹೋಲಿಸಿದರೆ ಮೆಮೊರಿ ಬ್ಯಾಂಡ್‌ವಿಡ್ತ್ ಶೇ.50ರಷ್ಟು ಹೆಚ್ಚಾಗಿದೆ. GPU ಕಾರ್ಯಕ್ಷಮತೆ ಶೇ.40ರಷ್ಟು ಹಾಗೂ AI ಪ್ರೊಸೆಸಿಂಗ್ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಿದೆ ಎಂದು ಆ್ಯಪಲ್ ಹೇಳಿದೆ.
ಎರಡೂ ಮಾದರಿಗಳು iOS 27ನಲ್ಲಿ ಕಾರ್ಯನಿರ್ವಹಿಸಲಿದ್ದು, ಹೊಸ Apple Intelligence ಫೀಚರ್‌ಗಳು ಮತ್ತು Siri AI ಸೌಲಭ್ಯಗಳನ್ನು ಒಳಗೊಂಡಿವೆ.
ಕ್ಯಾಮೆರಾದಲ್ಲಿ ಅಪ್‌ಗ್ರೇಡ್
ಹಿಂಭಾಗದಲ್ಲಿ ಮೂರು 48MP ಕ್ಯಾಮೆರಾಗಳನ್ನು ನೀಡಲಾಗಿದೆ. ಮುಖ್ಯ 48MP Fusion ಕ್ಯಾಮೆರಾದಲ್ಲಿ ಮೊದಲ ಬಾರಿಗೆ Variable Aperture ಸೌಲಭ್ಯ ಪರಿಚಯಿಸಲಾಗಿದೆ. ಜೊತೆಗೆ 48MP Ultra Wide ಮತ್ತು 48MP Telephoto ಕ್ಯಾಮೆರಾಗಳಿವೆ.
ಮುಂಭಾಗದಲ್ಲಿ 18MP ಕ್ಯಾಮೆರಾ ಇದ್ದು, Auto Focus ಮತ್ತು Centre Stage ಸೌಲಭ್ಯಗಳಿವೆ. Pro Controls ಮೂಲಕ Aperture, Shutter Speed ಹಾಗೂ White Balance ಸೇರಿದಂತೆ ಹಲವು ಸೆಟ್ಟಿಂಗ್‌ಗಳನ್ನು ಬಳಕೆದಾರರು ನಿಯಂತ್ರಿಸಬಹುದು.
ಬ್ಯಾಟರಿ ಮತ್ತು ಚಾರ್ಜಿಂಗ್
ಐಫೋನ್ 18 ಪ್ರೊ ಒಂದು ಚಾರ್ಜ್‌ನಲ್ಲಿ 24 ಗಂಟೆಗಳವರೆಗೆ ಹಾಗೂ ಪ್ರೊ ಮ್ಯಾಕ್ಸ್ 30 ಗಂಟೆಗಳವರೆಗೆ ಬಳಕೆ ನೀಡಲಿದೆ ಎಂದು ಆ್ಯಪಲ್ ತಿಳಿಸಿದೆ. ವಿಡಿಯೋ ಪ್ಲೇಬ್ಯಾಕ್‌ನಲ್ಲಿ ಕ್ರಮವಾಗಿ 36 ಮತ್ತು 45 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಿಗಲಿದೆ.
ವೈರ್ಡ್ ಚಾರ್ಜಿಂಗ್ ಮೂಲಕ ಐಫೋನ್ 18 ಪ್ರೊ ಅನ್ನು ಸುಮಾರು 15 ನಿಮಿಷಗಳಲ್ಲಿ ಶೇ.50ರಷ್ಟು ಚಾರ್ಜ್ ಮಾಡಬಹುದು.
C2 ಮೋಡೆಮ್ ವಿಶೇಷತೆ
ಐಫೋನ್ 18 ಪ್ರೊ ಸರಣಿಯಲ್ಲಿ ಆ್ಯಪಲ್‌ನ ಹೊಸ C2 ಮೋಡೆಮ್ ಬಳಕೆಯಾಗಿದೆ. ಇದು ಹಿಂದಿನ C1X ಮೋಡೆಮ್‌ಗಿಂತ ವೇಗದ ಅಪ್‌ಲೋಡ್ ನೀಡುವುದರ ಜೊತೆಗೆ ಶೇ.15ರಷ್ಟು ಕಡಿಮೆ ವಿದ್ಯುತ್ ಬಳಸುತ್ತದೆ ಎಂದು ಕಂಪನಿ ಹೇಳಿದೆ.
ಇನ್ನು, ಫೋನ್ ಬಿಸಿಯಾಗುವುದನ್ನು ನಿಯಂತ್ರಿಸಲು ಹಿಂದಿನ ಮಾದರಿಗಿಂತ ಮೂರು ಪಟ್ಟು ಹೆಚ್ಚಿನ ಮೇಲ್ಮೈ ಪ್ರದೇಶ ಹೊಂದಿರುವ ಹೊಸ Vapor Chamber ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.




































