27.6 C
Udupi
Tuesday, September 8, 2026
spot_img
spot_img
HomeBlogನೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, BIS ' ಸ್ಟಾಂಡರ್ಡ್ಸ್ ಕ್ಲಬ್ ನ ವತಿಯಿಂದ ರಸಪ್ರಶ್ನೆ...

ನೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, BIS ‘ ಸ್ಟಾಂಡರ್ಡ್ಸ್ ಕ್ಲಬ್ ನ ವತಿಯಿಂದ ರಸಪ್ರಶ್ನೆ ಸ್ಪರ್ಧೆ

ಸಾಣೂರು: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ‘ಸ್ಟ್ಯಾಂಡರ್ಡ್ಸ್ ಕ್ಲಬ್’ ನ ವತಿಯಿಂದ ರಸಪ್ರಶ್ನೆ ಸ್ಪರ್ಧೆಯನ್ನು
ದಿನಾಂಕ 05.09.2026 ರಂದು ಸರಕಾರಿ ಪೂರ್ವ ಕಾಲೇಜು, ಸಾಣೂರು ಇಲ್ಲಿ ಕಾಲೇಜಿನ ‘ಸ್ಟ್ಯಾಂಡರ್ಡ್ಸ್ ಕ್ಲಬ್’ ನ ವತಿಯಿಂದ ನಡೆಸಲಾಯಿತು. ಕ್ಲಬ್ ನ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಿ ಶಿಕ್ಷಕರನ್ನು ಅಭಿನಂದಿಸಲಾಯಿತು.

ಈ ಕಾರ್ಯಕ್ರಮವನ್ನು ಸ್ಟ್ಯಾಂಡರ್ಡ್ಸ್ ಕ್ಲಬ್ ನ ನಾಯಕಿಯಾದ ಕುಮಾರಿ ಅಲೀನಾ ತ್ರಿಷಾ ನೊರೊನ್ಹ ನಾಯಕತ್ವದಲ್ಲಿ ಮಾರ್ಗದರ್ಶಕರಾದ ಶ್ರೀ ನರೇಶ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಅರ್ಥಪೂರ್ಣವಾಗಿ ನಡೆಸಿ ಯಶಸ್ವಿಗೊಳಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ
ಶ್ರೀಮತಿ ಸುಚೇತಾ ಕಾಮತ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ MRPL ನ ಕ್ವಾಲಿಟಿ ಕಂಟ್ರೋಲ್ ಮ್ಯಾನೇಜರ್ ರಾಜೇಂದ್ರ ಎಸ್ ಸಿ ಅವರು ಬ್ಯೂರೋ
ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಬಗ್ಗೆ ತಿಳಿಸುತ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಉಪನ್ಯಾಸಕರಿಗೆ ಶಿಕ್ಷಕರ ದಿನದ ಶುಭಾಶಯ ತಿಳಿಸಿದರು. ಕುಮಾರಿ ಸಂಜನಾ ಎಲ್ಲರನ್ನೂ ಸ್ವಾಗತಿಸಿದರು. ಕುಮಾರಿ ರಿಹಾ ಎಲ್ಲರನ್ನೂ ವಂದಿಸಿದರು. ಸ್ಟ್ಯಾಂಡರ್ಡ್ಸ್ ಕ್ಲಬ್ ನ ವಿದ್ಯಾರ್ಥಿಗಳಿಗೆ BIS ವತಿಯಿಂದ CET ತಯಾರಿಗೆ ಅಧ್ಯಯನ ಕೋಶವನ್ನು ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಸ್ಟ್ಯಾಂಡರ್ಡ್ಸ್ ಕ್ಲಬ್ ನ ಸ್ವಯಂ ಸೇವಕರಿಗೆ ನೋಟ್ ಪುಸ್ತಕ ಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಮಾರ್ಗದರ್ಶಕರಾದ ಶ್ರೀ ನರೇಶ್ ಆಚಾರ್ಯ ಇವರು BIS ಮಾರುಕಟ್ಟೆಯಲ್ಲಿ ಬರುವ ಉತ್ಪನ್ನಗಳಿಗೆ ಮಾನಕಗಳನ್ನು (standards) ಮಾಡಿರುವ ಉದ್ದೇಶಗಳ ಬಗ್ಗೆ ಮತ್ತು ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಟೆಲ್ಮ ರೀಟಾ ರಸ್ಕಿನ್ಹಾ, ಶ್ರೀಮತಿ ಸ್ಮಿತಾ ಜೋಷ್ಮ ಫೆರ್ನಾಂಡಿಸ್ ಶ್ರೀಮತಿ ಗೌರಿ ಎನ್ ಜಿ ಹಾಗೂ ಹಿರಿಯ ಉಪನ್ಯಾಸಕರಾದ ಡಾ. ಸುಮತಿ ಹಾಗು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕುಮಾರ್ ಧನುಷ್ ಕಾಲೇಜಿನಲ್ಲಿ ಸ್ಟ್ಯಾಂಡರ್ಡ್ಸ್ ಕ್ಲಬ್ ನ ಮಹತ್ವ ಮತ್ತು ಅದರ ಕಾರ್ಯ ವೈಖರಿಯನ್ನು ತಿಳಿಸಿದರು. ಕುಮಾರಿ ನಿಶ್ರ ಬಾನು BIS ನ ಇತಿಹಾಸ ಹಾಗೂ BIS ನಲ್ಲಿ ನಡೆದ ವಿದ್ಯಮಾನಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳಾದ ಕುಮಾರಿ ರಕ್ಷಿತಾ, ಕುಮಾರಿ ಆಫ್ಶ ನಾಝ್ ಜೀವನದಲ್ಲಿ ಶಿಕ್ಷಕರ ಪಾತ್ರವನ್ನು ತಿಳಿಸಿದರು. BIS ನ ಎಲ್ಲಾ ವಿದ್ಯಮಾನಗಳ, ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ standards watch ಹಾಗೂ BIS ಮಕ್ಕಳಿಗಾಗಿ ಸಿದ್ಧಪಡಿಸಿದ ಸುಮಾರು 52 ಪ್ರೊಡಕ್ಟ್ ಗಳ Learning science from standards ನ ಪುಸ್ತಕಗಳನ್ನು ಆಧರಿಸಿ ತಯಾರಿಸಿದ 50 ಪ್ರಶ್ನೆಗಳನ್ನು ರಸಪ್ರಶ್ನೆ ಪ್ರಶ್ನೆಪತ್ರಿಕೆಯಲ್ಲಿ ಕೇಳಲಾಯಿತು. ಕ್ಲಬ್ ನ ಎಲ್ಲಾ ಸದಸ್ಯರು ಉತ್ಸುಕತೆಯಿಂದ ರಸಪ್ರಶ್ನೆಯಲ್ಲಿ ಭಾಗವಹಿಸಿದರು. ಪ್ರಥಮ, ದ್ವಿತೀಯ, ತೃ ತೀಯ ಹಾಗೂ ಸಮಾಧಾನಕರ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ BIS ನಗದು ಪುರಸ್ಕಾರಗಳನ್ನು ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸುತ್ತದೆ. ಕಾರ್ಯಕ್ರಮ ಮುಗಿದ ನಂತರ ಕ್ಲಬ್ ನ ಸದಸ್ಯರಿಗೆ ಉಪಹಾರ ಹಾಗೂ ಸಿಹಿತಿನಿಸುಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವತಿಯಿಂದ ನೀಡಲಾಯಿತು. ಕಾರ್ಯಕ್ರಮದ ಛಾಯಚಿತ್ರವನ್ನು ಕಾಲೇಜಿನ ಹಳೆ ವಿದ್ಯಾರ್ಥಿ ವಿಘ್ನೇಶ್ ರಾವ್ ಸೆರೆಹಿಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page