
ದಿನಾಂಕ 06-09-2026 ರಂದು ರೋಟರಿ ಕ್ಲಬ್ ಕಾರ್ಕಳ ಇವರು ಡಾಕ್ಟರ್ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ, ಕಾರ್ಕಳ ಮತ್ತು
ರೋಟರ್ರಾಕ್ಟ್ ಕ್ಲಬ್ ಕಾರ್ಕಳ ಇವರ ಸಹಕಾರ ಮತ್ತು ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆವಾ೯ಜೆ ಕಾರ್ಕಳದಲ್ಲಿ ಯಶಸ್ವಿಯಾಗಿ
ಹಮ್ಮಿಕೊಂಡಿದ್ದರು.
ಈ ಶಿಬಿರದಲ್ಲಿ ಕಾರ್ಕಳ ಮತ್ತು ಆಸುಪಾಸಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ರೋ. ಕೆ ವಿಜೇಂದ್ರ ಕುಮಾರ್, ಸಹಾಯಕ ಗವರ್ನರ್ ರೋ. ಕೆ ಸುರೇಶ್ ನಾಯಕ್,
ಮಾಜಿ ಜಿಲ್ಲಾ ಗವರ್ನರ್ ರೋ. ಡಾ. ಭರತೇಶ್ ಆದಿರಾಜ್, ಡಿ.ಆರ್.ಸಿ.ಸಿ.ರೋ. ಡಾ. ಸುರೇಶ್ ಶೆಣೈ, ರೋಟರ್ರಾಕ್ಟ್ ಕ್ಲಬ್ ನ ಸಭಾಪತಿ ರೋ. ಬಾಲಕೃಷ್ಣ ದೇವಾಡಿಗ, ರೋಟರ್ರಾಕ್ಟ್ ಕ್ಲಬ್
ಅಧ್ಯಕ್ಷೆ ಪ್ರಾಪ್ತಿ ಪೂಜಾರಿ, ಕಾರ್ಯದರ್ಶಿ ಲಕ್ಷ್ಮಿಕಾಮತ್ ಆ್ಯನ್ಸ್ ಕ್ಲಬ್ ನ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಕಾರ್ಯದರ್ಶಿ ರೋ. ಉದಯಕುಮಾರ್ ಕಡಂಬ , ರೋ.ಇಕ್ಬಾಲ್ ಅಹಮ್ಮದ್ ಮತ್ತು ಇತರ ರೊಟೇರಿಯನ್ಸ್, ರೊಟ್ರಾಕ್ಟರ್ಸ್ ಮತ್ತು ಆ್ಯನ್ಸ್ ಸದಸ್ಯೆಯರು ಹಾಗೂ ಡಾಕ್ಟರ್ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು
ಭಾಗವಹಿಸಿದ್ದರು.




































