
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ (ರಿ )ಟ್ರಸ್ಟ್ ಉಡುಪಿ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಕಾರ್ಯಕ್ರಮದಲ್ಲಿ ಪೆರ್ಡೂರು ವಲಯ ದ ಕುಕ್ಕೆಹಳ್ಳಿ ಕಾರ್ಯಕ್ಷೇತ್ರದ ಜ್ಯಾನೋದಯ ಜ್ಞಾನ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇಂದು ಪಿಎಂ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ, ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಗಿರಿಜ ಹಿರಿಯ ಸದಸ್ಯರು ಜ್ಯೋತಿ ಜ್ಞಾನವಿಕಾಸ ಕೇಂದ್ರ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತೋಷ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಎಸ್ ಪಿ ಕಚೇರಿ ಉಡುಪಿ ಇವರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಇರುವ ಕಾನೂನು ನೆರವು ಮತ್ತು ಸೈಬರ್ ಅಪರಾಧಗಳ ತಡೆ ಬಗ್ಗೆ. ಮಕ್ಕಳು ಮಾದಕ ವ್ಯಸನಕ್ಕೆ ಒಳಗಾಗದಂತೆ ಪೋಷಕರು ಹೆಚ್ಚಿನ ಗಮನ ವಹಿಸುವಂತೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸುಧಾಕರ ಶೆಟ್ಟಿ ತಂಗಾಣ ಇವರು ಧಾರ್ಮಿಕ ಆಚರಣೆಗಳಲ್ಲಿ ಮಹಿಳೆಯ ಸಹಭಾಗಿತ್ವದ ಪ್ರಾಮುಖ್ಯತೆ, ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸುವಲ್ಲಿ ಮಹಿಳೆಯ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕಿರಣ್ ಕುಮಾರ್ ಹೆಗ್ಡೆ, ಮಾಜಿ ಪಂಚಾಯತ್ ಸದಸ್ಯರು ಹಾಗೂ ನಿಕಟ ಪೂರ್ವ ಜನ ಜಾಗೃತಿ ವೇದಿಕೆ ಸದಸ್ಯರು,ಶ್ರೀಮತಿ ವಿಶಾಲಾಕ್ಷಿ, ಅಧ್ಯಕ್ಷರು ಕುಕ್ಕೆಹಳ್ಳಿ ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ಡೂರು ವಲಯ, ಮನೋರಮ ಮೇಲ್ವಿಚಾರಕರು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೆರ್ಡೂರು ವಲಯ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ತಾಲೂಕಿನ ಜ್ಯಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಪೂರ್ಣಿಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇಂದ್ರದ ಸಂಯೋಜಕಿ ಪ್ರಮೀಳಾ ರವರು ಕೇಂದ್ರದ ವರದಿ ವಾಚನ , ನಿರ್ಮಲ ರವರು ರವರು ಸ್ವಾಗತ, ಪವಿತ್ರ ರವರು ರವರು ಪ್ರಾರ್ಥನೆ, ಯಶೋಧ ಧನ್ಯವಾಧ ಸಮರ್ಪಣೆ ಮಾಡಿದರು. ಶಿಲ್ಪ ರವರು ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು ಕೇಂದ್ರದ ಸದಸ್ಯರು ವರಮಹಾಲಕ್ಷ್ಮಿ ಪೂಜೆ, ಭಜನಾ ಕಾರ್ಯಕ್ರಮವನ್ನು ಮಾಡಿದರು. ಕೇಂದ್ರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.






















































































