29.4 C
Udupi
Thursday, September 3, 2026
spot_img
spot_img
HomeBlog'ಮಾನವೀಯ ನೆರವು ಬೇಡ, ಸೂಕ್ತ ಪರಿಹಾರ ಬೇಕು': ಭಾರತ, ಚೀನಾ, ಅಮೆರಿಕಕ್ಕೆ ನೇಪಾಳದಿಂದ ನಷ್ಟಭರ್ತಿ ಬೇಡಿಕೆ

‘ಮಾನವೀಯ ನೆರವು ಬೇಡ, ಸೂಕ್ತ ಪರಿಹಾರ ಬೇಕು’: ಭಾರತ, ಚೀನಾ, ಅಮೆರಿಕಕ್ಕೆ ನೇಪಾಳದಿಂದ ನಷ್ಟಭರ್ತಿ ಬೇಡಿಕೆ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹವು ಅಪಾರ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. 1,127 ಜನರನ್ನು ಕಳೆದುಕೊಂಡಿರುವ ನೇಪಾಳ ಸರ್ಕಾರ ಇದೀಗ ಭಾರತ, ಚೀನಾ ಮತ್ತು ಅಮೆರಿಕದಂತಹ ಪ್ರಮುಖ ರಾಷ್ಟ್ರಗಳಿಂದ ಕೇವಲ ಮಾನವೀಯ ನೆರವಲ್ಲ, ದೇಶಕ್ಕೆ ಉಂಟಾದ ವಿನಾಶಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದೆ.

ಕಾರ್ಬನ್ ಹೊರಸೂಸುವಿಕೆಯಲ್ಲಿ ನೇಪಾಳದ ಕೊಡುಗೆ ಅತ್ಯಂತ ಕಡಿಮೆಯಾಗಿದೆ. ಆದರೆ ಭಾರತ, ಚೀನಾ ಮತ್ತು ಅಮೆರಿಕದಂತಹ ದೊಡ್ಡ ಕೈಗಾರಿಕಾ ರಾಷ್ಟ್ರಗಳ ಮಾಲಿನ್ಯದಿಂದ ಹಿಮಾಲಯ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಉಷ್ಣಾಂಶ ಏರಿಕೆಯಿಂದ ಹಿಮನದಿಗಳು ಕರಗಿ ಭೀಕರ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂಬುದು ನೇಪಾಳದ ವಾದವಾಗಿದೆ.

ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿರುವ ಶ್ರೀಮಂತ ಹಾಗೂ ಕೈಗಾರಿಕಾ ರಾಷ್ಟ್ರಗಳು, ಅದರ ದುಷ್ಪರಿಣಾಮ ಎದುರಿಸುತ್ತಿರುವ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಬೇಕು ಎಂಬ ಅಂತಾರಾಷ್ಟ್ರೀಯ ಹವಾಮಾನ ಒಪ್ಪಂದವನ್ನು ನೇಪಾಳ ಉಲ್ಲೇಖಿಸಿದೆ.

ಪ್ರವಾಹದ ಸಂದರ್ಭದಲ್ಲಿ ಆಹಾರ ಅಥವಾ ಪರಿಹಾರ ಸಾಮಗ್ರಿಗಳನ್ನು ಕಳುಹಿಸುವುದು ಶಾಶ್ವತ ಪರಿಹಾರವಲ್ಲ ಎಂದು ನೇಪಾಳ ಹೇಳಿದೆ. ದೇಶದ ಮೂಲಸೌಕರ್ಯ ನಾಶ, ಹಿಮನದಿಗಳ ಹಾನಿ ಮತ್ತು ಜೀವಹಾನಿಗೆ ಪ್ರಮುಖ ಮಾಲಿನ್ಯಕಾರಕ ರಾಷ್ಟ್ರಗಳು ಹೊಣೆ ಹೊತ್ತು ನಷ್ಟಭರ್ತಿ ನೀಡಬೇಕು ಎಂದು ಒತ್ತಾಯಿಸಿದೆ.

ಭಾರತ ಈಗಾಗಲೇ ಐದು ಬಾರಿ ಮಾನವೀಯ ನೆರವು ಹೊತ್ತ ವಿಮಾನಗಳನ್ನು ನೇಪಾಳಕ್ಕೆ ಕಳುಹಿಸಿದೆ. ಆರಂಭದಲ್ಲಿ ವಿದೇಶಿ ರಕ್ಷಣಾ ನೆರವನ್ನು ನಿರಾಕರಿಸಿದ್ದ ನೇಪಾಳ, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಭಾರತ ಮತ್ತು ಚೀನಾದಿಂದ ವಿಶೇಷ ರಕ್ಷಣಾ ಪಡೆ, ಫಾರೆನ್ಸಿಕ್ ತಜ್ಞರು ಹಾಗೂ ತಾಂತ್ರಿಕ ನೆರವನ್ನು ಪಡೆದುಕೊಳ್ಳುತ್ತಿದೆ.

ವಿಶ್ವಸಂಸ್ಥೆ ಶೃಂಗಸಭೆಗೆ ಪ್ರಧಾನಿ ಬಾಲೆನ್ ಶಾ?

ಸೆಪ್ಟೆಂಬರ್ 8ರಿಂದ ಆರಂಭವಾಗಲಿರುವ 81ನೇ ವಿಶ್ವಸಂಸ್ಥೆ ಮಹಾಸಭೆಯಲ್ಲಿ ರಸುವಾ ಪ್ರವಾಹ ದುರಂತ ಮತ್ತು ಹವಾಮಾನ ನ್ಯಾಯದ ಕುರಿತು ಮಾತನಾಡಲು ಪ್ರಧಾನಿ ಬಾಲೆನ್ ಶಾ ನ್ಯೂಯಾರ್ಕ್‌ಗೆ ತೆರಳುವ ಸಾಧ್ಯತೆಯಿದೆ. ತುರ್ತು ಆರ್ಥಿಕ ನೆರವಿಗಾಗಿ ವಿಶ್ವಸಂಸ್ಥೆಯ ಬೆಂಬಲಿತ ‘ಫಂಡ್ ಫಾರ್ ರೆಸ್ಪಾಂಡಿಂಗ್ ಟು ಲಾಸ್ ಆ್ಯಂಡ್ ಡ್ಯಾಮೇಜ್’ಗೆ ನೇಪಾಳ ಸರ್ಕಾರ ಅಧಿಕೃತ ಮನವಿ ಸಲ್ಲಿಸಿದೆ.

ವಿತ್ತ ಸಚಿವ ಸ್ವರ್ಣಿಮ್ ವಾಗ್ಲೆ ಪ್ರಕಾರ, ಪ್ರವಾಹದಿಂದ ಮೂಲಸೌಕರ್ಯ, ಜಲವಿದ್ಯುತ್ ಯೋಜನೆಗಳು ಮತ್ತು ಸೇತುವೆಗಳಿಗೆ ಭಾರೀ ಹಾನಿಯಾಗಿದೆ. ಪುನರ್ನಿರ್ಮಾಣಕ್ಕಾಗಿ ಸುಮಾರು 4ರಿಂದ 5 ಶತಕೋಟಿ ಅಮೆರಿಕನ್ ಡಾಲರ್ ಅಗತ್ಯವಿದ್ದು, ಇದು ನೇಪಾಳದ ಒಟ್ಟು ಜಿಡಿಪಿಯ ಶೇಕಡಾ 10ರಷ್ಟಾಗಿದೆ.

ಭಾರತದ ನಿಲುವೇನು?

ಒಟ್ಟು ಕಾರ್ಬನ್ ಹೊರಸೂಸುವಿಕೆಯಲ್ಲಿ ಭಾರತ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದರೂ, ತಲಾ ವ್ಯಕ್ತಿಯ ಹೊರಸೂಸುವಿಕೆ ಪ್ರಮಾಣ ಅಮೆರಿಕ ಮತ್ತು ಚೀನಾಕ್ಕಿಂತ ಕಡಿಮೆಯಾಗಿದೆ. ಭಾರತದಲ್ಲಿ ಇದು ಸುಮಾರು 3 ಟನ್ ಇದ್ದರೆ, ಅಮೆರಿಕದಲ್ಲಿ 17 ಟನ್ ಮತ್ತು ಚೀನಾದಲ್ಲಿ 11 ಟನ್ ಇದೆ. ಹವಾಮಾನ ಬದಲಾವಣೆಯ ಹೊಣೆಯನ್ನು ಹೆಚ್ಚು ಮಾಲಿನ್ಯ ಹೊರಸೂಸಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಹೆಚ್ಚಾಗಿ ಹೊರಬೇಕು ಎಂಬುದು ಭಾರತದ ನಿಲುವಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page