
ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಸದಸ್ಯರು ಹಿರಿಯಂಗಡಿಯ ಶಿವತ್ತಿಕೆರೆ ದೇವಸ್ಥಾನದ ಸುತ್ತಮುತ್ತ ಹಾಗೂ ವರ್ಧಮಾನ್ ಶಾಲೆಯ ಕ್ರಾಸ್ ರಸ್ತೆಗಳ ಬಳಿ ರಸ್ತೆ ಬದಿಯ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ಸುರಕ್ಷಿತ ಸಂಚಾರಕ್ಕೆ ಆದ್ಯತೆ!
ರಸ್ತೆ ಬದಿಗಳಲ್ಲಿ ಅತಿಯಾಗಿ ಬೆಳೆದಿದ್ದ ಹುಲ್ಲು-ಪೊದೆಗಳನ್ನು ತೆರವುಗೊಳಿಸಿ, ವಾಹನ ಸವಾರರಿಗೆ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ರಸ್ತೆ ವಿಭಜಕಗಳ ಸ್ವಚ್ಛತೆ ಮತ್ತು ಸೌಂದರ್ಯೀಕರಣ
ಡಿವೈಡರ್‌ಗಳನ್ನು ಸ್ವಚ್ಛಗೊಳಿಸಿ, ಸಂಕೇತ ಫಲಕಗಳನ್ನು ತೊಳೆದು, ಮಧ್ಯಭಾಗದಲ್ಲಿ ಸುಂದರವಾದ ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಮತ್ತೊಂದು ಹೆಜ್ಜೆ ಇಡಲಾಯಿತು.

ಗೌರವಯುತ ವಿಲೇವಾರಿ
ಅಶ್ವತ್ಥ ಮರದ ಬಳಿ ಜವಾಬ್ದಾರಿಯಿಲ್ಲದೆ ತಂದು ಹಾಕಲಾಗಿದ್ದ ದೇವರ ಹಳೆಯ ಫೋಟೋ ಫ್ರೇಮ್‌ಗಳನ್ನು ಗೌರವಪೂರ್ವಕವಾಗಿ ವಿಲೇವಾರಿ ಮಾಡಿ, ಮಣ್ಣಿನಲ್ಲಿ ಹೂತು, ಆ ಸ್ಥಳದಲ್ಲಿ ಹೊಸ ಸಸಿಗಳನ್ನು ನೆಡಲಾಯಿತು.
ಹಾನಿಗೊಳಗಾಗಿದ್ದ ನಾಮಫಲಕ ಮರುಸ್ಥಾಪನೆ
ಪೈಪ್‌ಲೈನ್ ಕಾಮಗಾರಿಯಿಂದ ಹಾನಿಗೊಳಗಾಗಿದ್ದ ಕ್ರಾಸ್‌ರೋಡ್‌ನ ನಾಮಫಲಕವನ್ನು ಮರುಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಯಿತು.

ವಿಶೇಷ ಅತಿಥಿಗಳ ಸಹಭಾಗಿತ್ವ
ಶ್ರಮದಾನದಲ್ಲಿ ವರ್ಧಮಾನ್ ಶಾಲೆಯ ಆಡಳಿತಾಧಿಕಾರಿ ಕುಮಾರಯ್ಯ ಹೆಗ್ಗಡೆ ಹಾಗೂ RPCA ಕ್ರಿಕೆಟ್ ತರಬೇತುದಾರರಾದ ರಾಘವೇಂದ್ರ ಪ್ರಭು ಅವರು ನಮ್ಮೊಂದಿಗೆ ಕೈಜೋಡಿಸಿ, ಕಾರ್ಯಕರ್ತರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದರು.


























































































