“ಬೃಹತ್ ವಾಹನ ಜಾಥಾ”

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ಬಿಲ್ಲವ ಸಮಾಜ ಸೇವಾ ಸಂಘ ರಿ. ಕಾರ್ಕಳ , ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ, ಯುವ ವಾಹಿನಿ (ರಿ). ಕಾರ್ಕಳ ಘಟಕ, ಯೂತ್ ಬಿಲ್ಲವ (ರಿ.) ಕಾರ್ಕಳ, ಸೇವಾದಳ (ರಿ). ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ ಕಾರ್ಕಳ ಹಾಗೂ ಕಾರ್ಕಳ ತಾಲೂಕಿನ ಸಮಸ್ತ ಬಿಲ್ಲವ ಸಂಘಗಳ ಸಹಭಾಗಿತ್ವದಲ್ಲಿ ಆಗಸ್ಟ್ 28 ರಂದು ಶುಕ್ರವಾರ “ಬೃಹತ್ ವಾಹನ ಜಾಥಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
“ವಾಹನ ಜಾಥ”ವು ಆ ದಿನ ಸಂಜೆ ಗಂಟೆ 4 ರಿಂದ ಕಾರ್ಕಳ ಬಿಲ್ಲವ ಸಂಘದಿಂದ ಪ್ರಾರಂಭಗೊಂಡು, ಬಂಡಿಮಠ -ಕಾರ್ಕಳ ಮುಖ್ಯ ರಸ್ತೆ- ಅನಂತಶಯನ -ದಾನಶಾಲೆ- ಆನೆಕೆರೆ ಮಾರ್ಗವಾಗಿ ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ ಇಲ್ಲಿಗೆ ತಲುಪಲಿದೆ.
ಈ ಕಾರ್ಯಕ್ರಮದಲ್ಲಿ ಸಮಸ್ತ ಬಿಲ್ಲವ ಸಂಘಗಳ ಹಾಗೂ ಸಂಘಟನೆಗಳ ಸದಸ್ಯರುಗಳು ಮತ್ತು ಸಮಸ್ತ ಬಿಲ್ಲವ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.





















































































