
ಉಡುಪಿ ,: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರನೊಬ್ಬನನ್ನು ಬರ್ಬರವಾಗಿ ಹತ್ಯೆ ಗೈದ ವಿಚಾರವೊಂದು ಮಂಗಳವಾರ ಮುಂಜಾನೆ ವರದಿಯಾಗಿದೆ.
ಬೋಟ್ ನಲ್ಲಿ ಕ್ಷುಲಕ ಕಾರಣಕ್ಕೆ ,ಕಾರ್ಮಿಕರ ನಡುವೆ ಗಲಾಟೆ ಉಂಟಾಗಿದ್ದು ಗಲಾಟೆ ಸಮಯದಲ್ಲಿ ಅಭಿಷೇಕ್ ಎಂಬ ವ್ಯಕ್ತಿಯನ್ನು ಸಹ ಕಾರ್ಮಿಕನೊಬ್ಬ ಕೊಲೆ ಗೈದಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಮೂಲದ ವ್ಯಕ್ತಿ ಒಬ್ಬನನ್ನು ಪೊಲೀಸರು ವರ್ಷಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿಸಿದ್ದಾರೆ. ಕೊನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.



















































































