ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ದೇಶ ಸೇವೆಗೆ ಸಿದ್ದರಾಗಬೇಕು : ಚಂದ್ರಕಾಂತ್ ಎಚ್ ನಾಯಕ್, ಮಾಜಿ ಸೈನಿಕರು

ದೇಶಪ್ರೇಮ, ಶಿಸ್ತು, ಸೇವಾಭಾವ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ದೇಶಸೇವೆಗೆ ಸಿದ್ಧರಾಗಬೇಕು ಎಂದು ಮಾಜಿ ಸೈನಿಕರಾದ ಚಂದ್ರಕಾಂತ್ ಹೆಚ್. ನಾಯಕ್ ಅವರು ಹೇಳಿದರು.ಇವರು ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿ ನಡೆದ 80ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಸಂಸ್ಥೆಯಸಂಚಾಲಕರಾದ ಶ್ರೀ ಕೆ. ವೆಂಕಟೇಶ್ ಪ್ರಭು ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸುತ್ತಾ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಸಂದೇಶವನ್ನು ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ವೀಣಾ ಶೆಣೈ ಇವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ಮಾಸ್ಟರ್ ಹೇಮಂತ್ ಕೆ. ಆರ್, ಮಾಸ್ಟರ್ ಸಾಗರ್ ನಾಯಕ್ ಹಾಗೂ ಕುಮಾರಿ ಇಶಿತಾ ಸ್ವಾತಂತ್ರ್ಯದ ಮಹತ್ವವನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಕುಮಾರಿ ಜೋವಿಯಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಮಾಸ್ಟರ್ ಸಂಕಲ್ಪ್ ಇವರು ಧನ್ಯವಾದವಿತ್ತರು.
ಸ್ವಂತ್ರೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳು ಹಾಗೂ ದೇಶಭಕ್ತಿಯನ್ನು ಸಾರುವ ಮನರಂಜನಾ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಬಂಧುಗಳು ಉಪಸ್ಥಿತರಿದ್ದರು.






















