ಪೂರ್ವನಿರ್ಧರಿತ ಗುರಿ ಇರಬೇಕು : ಲೆಫ್ಟಿನೆಂಟ್ ಜನರಲ್ ಜಗದೀಶ್.ಎಚ್

ಉಡುಪಿ ಜ್ಞಾನಸುಧಾದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ, ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಹೆಚ್ (ನಿವೃತ್ತ) ಇವರು ಜೀವನದಲ್ಲಿ ಯಶಸ್ಸು ಲಭಿಸಬೇಕಾದರೆ ಗುರಿಯನ್ನು ಮೊದಲೇ ನಿರ್ಧರಿಸಿಕೊಂಡು ವಿಶ್ವಾಸದಿಂದ ಮುಂದವರಿಯಬೇಕು.
ಪ್ರತಿ ಹೆಜ್ಜೆಯಲ್ಲೂ ಜೊತೆಯಾದ ಸರ್ವರಿಗೂ ಕೃತಜ್ಞತೆ ಸಲ್ಲಿಸುವ ಮನೋಭಾವ ನಮ್ಮಲ್ಲಿರಬೇಕು. ಭಾರತೀಯ ಸೇನೆಯಲ್ಲಿರುವ ಉದ್ಯೋಗಾವಕಾಶಗಳು, ವಿವಿಧ ರೀತಿಯ ಪರೀಕ್ಷೆಗಳು, ಸೇನೆಯಲ್ಲಿ ಸೇವೆ ಸಲ್ಲಿಸುವುದು ವ್ಯಕ್ತಿ ಗೌರವವನ್ನು ಹೆಚ್ಚಿಸುವುದರ ಜೊತೆಗೆ ವೃತ್ತಿ ಭದ್ರತೆಯನ್ನು ಒದಗಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಹೆಚ್ (ನಿವೃತ್ತ) ಇವರ ಸುದೀರ್ಘ ಕಾಲದ ಸೇವೆಯನ್ನು ಗುರುತಿಸಿ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿಧಿ ಭಾಗವತ್ , ಉಪನ್ಯಾಸಕರು, ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಸ್ವರೂಪ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.













































































































