
ಕಾರ್ಕಳ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರ್ಕಳದಲ್ಲಿ ಆ.15ರಂದು ಬೃಹತ್ ತಿರಂಗ ಯಾತ್ರೆ ಆಯೋಜಿಸಲಾಗಿದೆ. ‘ಯೂತ್ ಫಾರ್ ನೇಷನ್’ ಆಶ್ರಯದಲ್ಲಿ ನಡೆಯಲಿರುವ ಈ ಯಾತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.
ಆ.15ರಂದು ಬೆಳಗ್ಗೆ 10 ಗಂಟೆಗೆ ಅನಂತಶಯನ ವೃತ್ತದಿಂದ ಗಾಂಧಿ ಮೈದಾನದವರೆಗೆ ತಿರಂಗ ಯಾತ್ರೆ ನಡೆಯಲಿದ್ದು, ಕಾರ್ಕಳದ ವಿವಿಧ ಭಾಗಗಳಿಂದ ಜನರು ಭಾಗವಹಿಸಿ ರಾಷ್ಟ್ರಧ್ವಜದೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
‘ಬನ್ನಿ, ಭಾಗವಹಿಸೋಣ… ತಿರಂಗದೊಂದಿಗೆ ಒಂದಾಗೋಣ… ರಾಷ್ಟ್ರಭಕ್ತಿಯನ್ನು ಸಂಭ್ರಮಿಸೋಣ!’ ಎಂಬ ಸಂದೇಶದೊಂದಿಗೆ ಆಯೋಜಕರು ಸಾರ್ವಜನಿಕರನ್ನು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.




























































