ಅಧ್ಯಕ್ಷರಾಗಿ ಮನ್ಮಥ ಶೆಟ್ಟಿ ಬಡೇಕಾರ್, ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಪಡುಮನೆ

ಕುಂಟಿಬೈಲ್: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಂಟಿಬೈಲ್‌ನ 13ನೇ ಸಾಲಿನ ಗಣೇಶೋತ್ಸವ ಆಚರಣೆಯ ಸಿದ್ಧತೆಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಮಿತಿಯ ಅಧ್ಯಕ್ಷರಾಗಿ ಮನ್ಮಥ್ ಶೆಟ್ಟಿ ಬಡೇಕಾರ್, ಕಾರ್ಯದರ್ಶಿಯಾಗಿ ನಿತ್ಯಾನಂದ್ ಶೆಟ್ಟಿ ಪಡುಮನೆ, ಉಪಾಧ್ಯಕ್ಷರಾಗಿ ಸುಗುಣ ಶೆಟ್ಟಿ ಅಡ್ಕರೆ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಗಳಾಗಿ ರಮಾನಾಥ್ ಪೂಜಾರಿ ಪಡ್ಡಾಯಿಬೈಲ್ ಹಾಗೂ ವೇದಾ ರಾಜೇಶ್ ನೆಲ್ಲಿಗುಡ್ಡೆ, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರವೀಣ್ ಆರ್. ಕೋಟ್ಯಾನ್ ತನ್ವಿ, ಶ್ರೇಯಸ್ ಶೆಟ್ಟಿ ಕೆಳಗಿನ ಪಡುಮನೆ ಹಾಗೂ ಸಂಗೀತಾ ರತ್ನಾಕರ್ ನಾಯಕ್ ಅವರನ್ನು ನೇಮಕ ಮಾಡಲಾಗಿದೆ.
ಇನ್ನು ಕೋಶಾಧಿಕಾರಿಯಾಗಿ ಶ್ರೇಯಾ ಈಶ್ವರ್ ಪ್ರಸಾದ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲು ಸಿದ್ಧತೆಗಳು ನಡೆಯಲಿವೆ ಎಂದು ಸಮಿತಿ ತಿಳಿಸಿದೆ.




























































