32.2 C
Udupi
Saturday, March 15, 2025
spot_img
spot_img
HomeBlogಜೆ.ಇ.ಇ ಮೈನ್-ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಅಂತಿಮ ಫಲಿತಾಂಶ ಪ್ರಕಟ

ಜೆ.ಇ.ಇ ಮೈನ್-ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಅಂತಿಮ ಫಲಿತಾಂಶ ಪ್ರಕಟ

ಜ್ಞಾನಸುಧಾದ ಬಿಪಿನ್ ಜೈನ್.ಬಿ.ಎಂ.ಗೆ 99.9754815 ಪರ್ಸಂಟೈಲ್‌ನೊದಿಗೆ ಆಲ್ ಇಂಡಿಯಾ 22ನೇ ರ‍್ಯಾಂಕ್ 9 ಮಂದಿಗೆ 99ಕ್ಕೂ ಅಧಿಕ ಪರ್ಸಂಟೈಲ್

ಆಲ್ ಇಂಡಿಯ ರ‍್ಯಾಂಕ್(ಜನರಲ್ ಮೆರಿಟ್) 100ರ ಒಳಗೆ 3 ಮಂದಿ,ಗಣಿತ ಶಾಸ್ತ್ರದಲ್ಲಿ ಇಬ್ಬರಿಗೆ 100 ಪರ್ಸಂಟೈಲ್

ಕಾರ್ಕಳ : ರಾಷ್ಟçಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.
ವಿದ್ಯಾರ್ಥಿಗಳಾದ ಬಿಪಿನ್ ಜೈನ್.ಬಿ.ಎಂ. 99.9754815ಪರ್ಸಂಟೈಲ್(ಗಣಿತ ಶಾಸ್ತç 100 ಪರ್ಸಂಟೈಲ್, ಆಲ್ ಇಂಡಿಯಾ ರ‍್ಯಾಂಕ್ 22), ಕೇದಾರ್ ರಮೇಶ್ ಕುಲಕರ್ಣಿ 99.9670351 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 32), ಪ್ರಣವ್ ಕುಮಾರ್ ಭಂಡಿ 99.9069226 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 75), ಚೈತನ್ಯ ಚಲಿತ್ 99.7905759 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 169), ಸುಜಲ್ ಸಚಿನ್ ಯಾಡವಿ 99.7875065 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 176), ಚಿರಂತನ ಜೆ.ಎ. 99.7498546 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 209), ಪ್ರಿಯಾಂಶ್ ಎಸ್.ಯು. 99.705255 ಪರ್ಸಂಟೈಲ್ (ಗಣಿತ ಶಾಸ್ತç 100 ಪರ್ಸಂಟೈಲ್, ಆಲ್ ಇಂಡಿಯಾ ರ‍್ಯಾಂಕ್ 245), ಅನುರಾಗ್ 99.3815893 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 492), ಹಾಗೂ ಕನ್ನಿಕಾ ದೀಪಕ್ ಶೆಟ್ಟಿ 99.3699886 ಪರ್ಸಂಟೈಲ್(ಆಲ್ ಇಂಡಿಯಾ ರ‍್ಯಾಂಕ್ 515), ಗಳಿಸಿದ್ದಾರೆ.
ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ಮೊದಲ ಹಂತದ ಪರೀಕ್ಷೆಯಲ್ಲಿ ಕೇದಾರ್ ರಮೇಶ್ ಕುಲಕರ್ಣಿ 99.9670351ಪರ್ಸಂಟೈಲ್‌ನೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದು ಹಾಗೂ ಈಗಾಗಲೇ ಪ್ರಕಟಗೊಂಡ ಜೆ.ಇ.ಇ. ಮೈನ್ ಬಿ.ಟೆಕ್ -2024 ಅಂತಿಮ ಫಲಿತಾಂಶದಲ್ಲೂ ಜ್ಞಾನಸುಧಾದ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದು.
ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಳಗವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page