ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಸಾಧಕರಿಗೆ ವಿದ್ಯಾರ್ಥಿ ವೇತನ

ರೆಂಜಾಳ:ಜುಲೈ 28- ರೆಂಜಾಳ ಹಾ.ಉ. ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ರೆಂಜಾಳ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು,ಸಂಘದ ಅಧ್ಯಕ್ಷರಾದ ಜೋನ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು,2025 – 26 ನೇ ಸಾಲಿನಲ್ಲಿ ನಮ್ಮ ಸಂಘಕ್ಕೆ 4,93,227 ರೂ ಲಾಭ ಬಂದಿದ್ದು,20% ಡಿವಿಡೆಂಡ್ ಹಾಗೂ 65% ಬೋನಸ್ ನೀಡಲಾಯಿತು.
2025-26 ನೇ ಸಾಲಿನ SSLC ಮತ್ತು PUC ಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು.ಸಂಘದ 2 ಜನ ಸದಸ್ಯರಿಗೆ ಅನಾರೋಗ್ಯದ ಕಾರಣಕ್ಕಾಗಿ ತಲಾ 5000 ರೂ ನೀಡಲಾಯಿತು.
ಒಕ್ಕೂಟದ ವಿಸ್ತರಣಾಧಿಕಾರಿ ವಿನಯ್ ಕುಮಾರ್ ಅವರು ಲಾಭದಾಯಕ ಹೈನುಗಾರಿಕೆ.ಒಕ್ಕೂಟದ ಸೌಲಭ್ಯ,ಜಾನುವಾರುಗಳ ವಿಮಾ ರಕ್ಷಣೆ,ಹಸಿರು ಮೇವು,ಹೊರ ರಾಜ್ಯದ ಹಸುಗಳ ಖರೀದಿ,ಅಜೋಳ ರಚನೆ,ಸೈಲೇಜ್,ಕುರಿತು ಮಾಹಿತಿ ನೀಡಿದರು.ಒಕ್ಕೂಟದಿಂದ ದೊರಕುವ ಅನುದಾನಗಳ ಬಗ್ಗೆ ಕೂಡ ಮಾಹಿತಿ ನೀಡಿದರು
ಸಂಘದ ನಿರ್ದೇಶಕ ಸಂಪತ್ ಕುಮಾರ್ ಸ್ವಾಗತಿಸಿ,ನಿರ್ದೇಶಕರಾದ ಜಯರಾಮ್ ಶೆಟ್ಟಿ ಧನ್ಯವಾದ ತಿಳಿಸಿದರು,ಕಾರ್ಯದರ್ಶಿ ಸ್ವಾತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು






















































