27.6 C
Udupi
Thursday, July 30, 2026
spot_img
spot_img
HomeBlogಅಮೆರಿಕದ ಗ್ಲಾಡ್‌ವಿನ್‌ನಲ್ಲಿ ವಿಚಿತ್ರ ಆದೇಶ: ಶೌಚಾಲಯ ಸೇರಿದಂತೆ ಪ್ಲಂಬಿಂಗ್ ಬಳಸದಂತೆ ತುರ್ತು ಸೂಚನೆ

ಅಮೆರಿಕದ ಗ್ಲಾಡ್‌ವಿನ್‌ನಲ್ಲಿ ವಿಚಿತ್ರ ಆದೇಶ: ಶೌಚಾಲಯ ಸೇರಿದಂತೆ ಪ್ಲಂಬಿಂಗ್ ಬಳಸದಂತೆ ತುರ್ತು ಸೂಚನೆ

ಗ್ಲಾಡ್‌ವಿನ್ (ಅಮೆರಿಕ): ಅಮೆರಿಕದ ಗ್ಲಾಡ್‌ವಿನ್ ನಗರದಲ್ಲಿ ಸಾರ್ವಜನಿಕರು ತಾತ್ಕಾಲಿಕವಾಗಿ ಶೌಚಾಲಯ ಸೇರಿದಂತೆ ಯಾವುದೇ ಪ್ಲಂಬಿಂಗ್ ವ್ಯವಸ್ಥೆ ಬಳಸಬಾರದು ಎಂದು ಸ್ಥಳೀಯ ಆಡಳಿತ ತುರ್ತು ಸೂಚನೆ ನೀಡಿದೆ.

ಜುಲೈ 27ರಂದು ಸುರಿದ ಭಾರಿ ಗುಡುಗು-ಮಳೆಯ ವೇಳೆ ಸಿಡಿಲು ಬಡಿದು ನಗರದ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ತೀವ್ರ ಹಾನಿಯಾಗಿದೆ. ಇದರಿಂದ ಘಟಕದ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಒಳಚರಂಡಿ ನೀರು ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳಿಗೆ ಹಿಂತಿರುಗಿ ಹರಿಯುವ ಅಪಾಯ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಶೌಚಾಲಯ, ಸಿಂಕ್, ಶವರ್ ಸೇರಿದಂತೆ ಯಾವುದೇ ನೀರು ಬಳಕೆಯ ಸಾಧನಗಳನ್ನು ಬಳಸಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಪರಿಸ್ಥಿತಿಯನ್ನು ಪರಿಶೀಲಿಸಿರುವ ಸಿಬ್ಬಂದಿಗಳು ಘಟಕವನ್ನು ಶೀಘ್ರ ದುರಸ್ತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ನಾರ್ತ್ ಪಾರ್ಕ್, ಸೌತ್ ಪಾರ್ಕ್, ಸಿಟಿ ಹಾಲ್, ಗ್ಲಾಡ್‌ವಿನ್ ಫಾರ್ಮರ್ಸ್ ಮಾರ್ಕೆಟ್ ಹಾಗೂ ಗ್ಲಾಡ್‌ವಿನ್ ಕೌಂಟಿ ಫೇರ್‌ಗ್ರೌಂಡ್ಸ್‌ನಲ್ಲಿ ತಾತ್ಕಾಲಿಕ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.

ಈ ಅಪರೂಪದ ಸೂಚನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕೆಲವರು ಈ ಕುರಿತು ಆತಂಕ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅನಾಹುತ ತಪ್ಪಿಸಲು ಆಡಳಿತದ ಸೂಚನೆ ಪಾಲಿಸಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page