ಪ್ರಕರಣ ದಾಖಲಿಸುವಂತೆ ಕಾರ್ಕಳ ನಗರ ಯುವ ಕಾಂಗ್ರೆಸ್ ಪೊಲೀಸ್ ರಿಗೆ ಮನವಿ

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಕುರಿತು ಯಾವುದೇ ಪುರಾವೆ ಇಲ್ಲದೆ 24 ಗಂಟೆಗಳ ಕಾಲ ನಶೆಯಲ್ಲಿ ಇರುತ್ತಾರೆ ಎಂದು ನಿರಾಧಾರ ಹಾಗೂ ಮಾನಹಾನಿಕರ ಆರೋಪ ಮಾಡಿ ರಾಹುಲ್ ಗಾಂಧಿ ಅವರ ವಂಶವನ್ನು ಧ್ವಂಸ ಮಾಡುತ್ತೇವೆ ಎಂಬ ಬೆದರಿಕೆಯ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ದ್ವೇಷ ಉದ್ವಿಗ್ನತೆ ಮತ್ತು ಅಶಾಂತಿಯನ್ನು ಸೃಷ್ಟಿಸಿ ಕಾನೂನು ಸುವಸ್ಥೆಗೆ ದಕ್ಕೆ ತರುವಂತ ಕೆಲಸವನ್ನು ಮಾಡಿರುವುದನ್ನು ಖಂಡಿಸಿ ಕಾರ್ಕಳ ನಗರ ಯುವ ಕಾಂಗ್ರೆಸ್ ವತಿಯಿಂದ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮನವಿ ಮಾಡಲಾಗಿದೆ.






























































































































