
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಅರ್ಥಪೂರ್ಣವಾಗಿ
ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ವಾಯುಸೇನೆಯ ನಿವೃತ್ತ ಎಸ್.ಜಿ.ಟಿ
ಕೃಷ್ಣಮೂರ್ತಿ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು ಕಾರ್ಗಿಲ್ ಯುದ್ಧದ
ನೆನಪುಗಳನ್ನು ಹಾಗೂ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳು ದೇಶದ ಸೈನ್ಯವನ್ನು ಸೇರಿ ಭಾರತ ಮಾತೆಯ ಸೇವೆ ಗೈಯಲು
ಮುಂದಾಗಬೇಕು ಎಂದು ಪ್ರೇರೇಪಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ಧ್ವನಿಯಾಗಿ ರಾಷ್ಟ್ರ ಪ್ರೇಮ ಮೆರೆದರು. ಕಾಲೇಜಿನ
ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ, ಜೆ.ಇ.ಇ/ನೀಟ್ ಫೌಂಡೇಶನ್ ಸ್ಟ್ಯೂಡೆಂಟ್ ಕೋರ್ಡಿನೇಟರ್ ಶ್ರೀಮತಿ ಶಮಿತ
ಉಪಸ್ಥಿತರಿದ್ದರು.ಶಿಕ್ಷಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.


















































