26.7 C
Udupi
Monday, July 27, 2026
spot_img
spot_img
HomeBlogರೋಟರಾಕ್ಟ್ ಕ್ಲಬ್ ಆಫ್ ಕಾರ್ಕಳ ವತಿಯಿಂದ, ಕಾರ್ಕಳದ ರೋಟರಿ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ

ರೋಟರಾಕ್ಟ್ ಕ್ಲಬ್ ಆಫ್ ಕಾರ್ಕಳ ವತಿಯಿಂದ, ಕಾರ್ಕಳದ ರೋಟರಿ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ

ದಿನಾಂಕ 26 ಜುಲೈ 2026 ರಂದು ರೋಟರಾಕ್ಟ್ ಕ್ಲಬ್ ಆಫ್ ಕಾರ್ಕಳ (RID 3182) ವತಿಯಿಂದ ಕಾರ್ಕಳದ ರೋಟರಿ ಪಾರ್ಕ್‌ನಲ್ಲಿ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದ ಮಹತ್ವವನ್ನು ಜನಸಾಮಾನ್ಯರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಗಿಡಗಳನ್ನು ನೆಟ್ಟು, ಅವುಗಳ ಸಂರಕ್ಷಣೆಯ ಸಂಕಲ್ಪವನ್ನು ಕೈಗೊಂಡರು.

ಕಾರ್ಯಕ್ರಮದಲ್ಲಿ ರೋಟರಾಕ್ಟ್ ಸಂಸ್ಥೆಯ ಸಭಾಪತಿಗಳಾದ RTN. ಬಾಲಕೃಷ್ಣ ದೇವಾಡಿಗ, RTN. ಶಿವಕುಮಾರ್, RTN.-RTR. ಚೇತನ್ ಕುಮಾರ್, RTN.-RTR. ಶಂಕರ್ ಕುಡ್ವ, RTN.-RTR. ಸಂದೇಶ್, ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷೆಯಾದ RTR. ಪ್ರಾಪ್ತಿ ಪೂಜಾರಿ, ಕಾರ್ಯದರ್ಶಿಗಳಾದ RTR. ಲಕ್ಷ್ಮೀ ಕಾಮತ್ ಹಾಗೂ ಸಂಸ್ಥೆಯ ಸದಸ್ಯರಾದ RTR. ಅನ್ವಯ್, RTR. ನಿಶ್ಚಿತ್ ಶೆಟ್ಟಿ, RTR. ಆಶೀಶ್, RTR. ಶ್ರಾವ್ಯ ಮತ್ತು RTR. ದೀಕ್ಷಾ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

ಈ ಗಿಡ ನೆಡುವ ಕಾರ್ಯಕ್ರಮವು ಪರಿಸರದ ಬಗ್ಗೆ ಸಮಾಜದಲ್ಲಿ ಜವಾಬ್ದಾರಿಯ ಮನೋಭಾವವನ್ನು ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ರೋಟರಾಕ್ಟ್ ಕ್ಲಬ್ ಆಫ್ ಕಾರ್ಕಳ ವ್ಯಕ್ತಪಡಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page