
ಕಾರ್ಕಳ: ಪತ್ರಕರ್ತರು ಸಮಾಜದ ಕನ್ನಡಿಯಾಗಿದ್ದು, ವರದಿಗಾರಿಕೆ ಮಾಡುವ ಸಂದರ್ಭದಲ್ಲಿ ಜಾಗರೂಕತೆ ಮತ್ತು ಕಾನೂನಿನ ಅರಿವು ಅತ್ಯಂತ ಮುಖ್ಯ ಎಂದು ಕಾರ್ಕಳ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕ ಪ್ರಸನ್ನ ಎಂ.ಎಸ್ ಹೇಳಿದರು.
ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪತ್ರಕರ್ತರಿಗಾಗಿ ಕಾನೂನು ಮಾಹಿತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಾಧ್ಯಮ ವರದಿಗಾರಿಕೆ ವೇಳೆ ಪತ್ರಕರ್ತರು ಎದುರಿಸಬಹುದಾದ ಕಾನೂನು ತೊಡಕುಗಳು ಹಾಗೂ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಅಪರಾಧ ಸುದ್ದಿಗಳು, ತನಿಖಾ ಹಂತದಲ್ಲಿರುವ ಪ್ರಕರಣಗಳು ಹಾಗೂ ಸೂಕ್ಷ್ಮ ಸಂವೇದನಾಶೀಲ ವಿಷಯಗಳ ಬಗ್ಗೆ ವರದಿ ಮಾಡುವಾಗ ಕಾನೂನು ಚೌಕಟ್ಟನ್ನು ಕಡ್ಡಾಯವಾಗಿ ಮೀರಬಾರದು. ವಿಶೇಷವಾಗಿ ವ್ಯಕ್ತಿಗಳ ಗೌಪ್ಯತೆಗೆ ಧಕ್ಕೆಯಾಗದಂತೆ, ತಪ್ಪು ಮಾಹಿತಿಗಳು ಪ್ರಸಾರವಾಗದಂತೆ ಹಾಗೂ ಸಂವಿಧಾನ ಮತ್ತು ಕಾನೂನುಬದ್ಧ ಮಿತಿಗಳನ್ನು ಮೀರದಂತೆ ವರದಿ ಮಾಡುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ
ಸುಳ್ಳು ಸುದ್ದಿ ಪ್ರಕಟಿಸಿದರೆ ಅಂತವರ ವಿರುದ್ದ
ಕೇಸು ದಾಖಲಿಸಬಹುದಾಗಿದೆ. ಕಾನೂನು ತಿಳಿದುಕೊಂಡು ಸುದ್ದಿ ಪ್ರಸಾರ ಮಾಡಬೇಕು. ಯಾವುದೇ ಧರ್ಮ, ಭಾಷೆ,ಜಾತಿಗೆ ವಿರುದ್ದವಾಗಿದ್ದಾರೆ ಅದನ್ನು ಸರಿಯಾಗಿ ತಿಳಿದು ಸುದ್ದಿ ಪ್ರಕಟಿಸುವ ಅನಿವಾರ್ಯವಿದೆ. ನ್ಯಾಯಲಯದಲ್ಲಿ ತಡೆಯಾಜ್ಞೆ ಇದ್ದ ಬಳಿಕವೂ ಸುದ್ದಿ ಮಾಡುವಂತಿಲ್ಲ.ಸಮಾಜಕ್ಕೆ ಸತ್ಯ ಹಾಗೂ ನಿಖರವಾದ ಮಾಹಿತಿ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಮೂಡಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಹೆಬ್ರಿ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲು, ಜಿಲ್ಲಾ ಉಪಾಧ್ಯಲ್ಷ ಉದಯ್, ಕಾರ್ಕಳ ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್ ಸಚ್ಚೇರಿಪೇಟೆ, ಕೋಶಾಧಿಕಾರಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.


















































