
ಕಾರ್ಕಳ : ಸ್ಥಳೀಯವಾಗಿ ಸಮಾಜಮುಖಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ಗುರು ದುರ್ಗಾ ಮಿತ್ರ ಮಂಡಳಿ ನಂದಳಿಕೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.
ಮಂಡಳಿಯ ಮುಂದಿನ ಎರಡು ವರ್ಷಗಳ ಅವಧಿಯ ಕಾರ್ಯಚಟುವಟಿಕೆಗಳಿಗಾಗಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಸತೀಶ್ ಕೆ. ನೂತನ ಅಧ್ಯಕ್ಷರಾಗಿ ಹಾಗೂ ನೂತನ ಕಾರ್ಯದರ್ಶಿಯಾಗಿ ಅನಿತ ಮೊಲಿ ಡಿಸೋಜ ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇತರ ಪದಾಧಿಕಾರಿಗಳು : ಗೌರವ ಅಧ್ಯಕ್ಷ ಶ್ರೀಕಾಂತ್ ಆಚಾರ್ಯ, ಸ್ಥಾಪಕ ಅಧ್ಯಕ್ಷ ಕಿರಣ್ ಚೌಟ, ಉಪಾಧ್ಯಕ್ಷೆ ಅಮಿತ ಶೆಟ್ಟಿ, ಜೊತೆ ಕಾರ್ಯದರ್ಶಿ: ನಿತಿನ್ ಚೌಟ, ಕೋಶಾಧಿಕಾರಿ: ಹರಿಪ್ರಸಾದ್ ನಂದಳಿಕೆ, ಗೌರವ ಸಲಹೆಗಾರಾಗಿ ಜೊಯ್ಸ್ ಟೆಲ್ಲಿಸ್, ಅರುಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.


















































