
ಅಯೋಧ್ಯೆ: ರಾಮಮಂದಿರದ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಗಾಗಿ ರಚಿಸಲಾದ 9 ಸದಸ್ಯರ ಸಮಿತಿಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಸ್ಥಾನ ನೀಡಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನುಮೋದಿಸಿರುವ ಈ ಸಮಿತಿಗೆ ಮಹಂತ ನೃತ್ಯ ಗೋಪಿಂದ ದೇವ್ ಗಿರಿ ಅಧ್ಯಕ್ಷರಾಗಿದ್ದಾರೆ. ಜಗದ್ಗುರು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ, ನಿರ್ಮೋಹಿ ಅಖಾಡದ ದಿನೇಂದ್ರ ದಾಸ್, ಮನಿರಾಮ್ ಚವಾನಿಯ ಕಮಲನಯನ ದಾಸ್, ರಾಮವಲ್ಲಭ ಕುಂಜ್‌ನ ರಾಜ್ ಕುಮಾರ್ ದಾಸ್ ಹಾಗೂ ರಾಮ ಕಥಾ ಕುಂಜ್‌ನ ರಾಮಾನಂದ ದಾಸ್ ಸೇರಿದಂತೆ ಹಲವು ಗಣ್ಯರು ಸಮಿತಿಯ ಸದಸ್ಯರಾಗಿದ್ದಾರೆ.


















































