ಹೃದಯದಲ್ಲಿ ದೇಶಪ್ರೇಮ, ಉಸಿರಿನಲ್ಲಿ ಭಾರತ ಸ್ವರಾಜ್ಯ – ಛತ್ರಪತಿ ಶಿವಾಜಿ ಮಹಾರಾಜ್
ಉಪನ್ಯಾಸ: ಮಂಜುನಾಥ್ ಮ. ಜುನಗೊಂಡ, ವಿಜಯಪುರ

ಶ್ರೀ ಮಹಾಗಣಪತಿ ದೇವಸ್ಥಾನ ಪದ್ಮ ನಗರ ಅಜೆಕಾರು ಮತ್ತು ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ಇದರ ದೇಶಪ್ರೇಮದ ಚಿಂತನೆಯೊಂದಿಗೆ, ದೇಶ ಸುಧಾ ಎರಡನೇ ಸಂಚಿಕೆ ಹಾಗೂ ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆಯನ್ನು ಪದ್ಮ ಗೋಪಾಲ್ ಸಭಾಂಗಣ ಪದ್ಮನಗರ ಅಜೆಕಾರು ಇಲ್ಲಿ ಆಯೋಜಿಸಲಾಗಿದ್ದು ,ಜುಲೈ 26ರಂದು ಸಂಜೆ 6.30ಕ್ಕೆ ಕಾರ್ಯಕ್ರಮ ನಡೆಯಲಿರುವುದು.
ಖ್ಯಾತ ವಾಗ್ಮಿ ಹಾಗೂ ಅಂಕಣಕಾರರಾದ ಶ್ರೀ ಮಂಜುನಾಥ ಮ ಜುನಗೊಂಡ ವಿಜಯಪುರ ಇವರು ಹೃದಯದಲ್ಲಿ ದೇಶಪ್ರೇಮ ,ಉಸಿರಿನಲ್ಲಿ ಭಾರತ ಸ್ವರಾಜ್ಯ- ಛತ್ರಪತಿ ಶಿವಾಜಿ ಮಹಾರಾಜ್ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿರುವರು.


















































