
ಗ್ರಾಮ ವಿಕಾಸ ಘಟಕ ಹೆಬ್ರಿ ತಾಲೂಕಿನ ಚಾರ ಗ್ರಾಮದ ಚಂದ್ರನಾಥ ಸ್ವಾಮಿ ಭಜನಾ ಮಂಡಳಿ ಮಂದಿರದಲ್ಲಿ ಇಂದು ಬಾಲಗೋಕುಲವನ್ನು ನಂದಿತಾ ಕಾಮತ್ ರವರು ಭಾರತ ಮಾತೆಯ ಭಾವಚಿತ್ರದ ಮುಂದೆ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಗ್ರಾಮ ಗ್ರಾಮಗಳಲ್ಲಿ ಸಂಸ್ಕಾರ , ಸಂಸ್ಕೃತಿಯನ್ನು ಕಲಿಸುವ ಕಾರ್ಯ ಆಗಬೇಕಿದೆ. ಪ್ರಸ್ತುತ ಸಮಾಜದ ವಿದ್ಯಾಮಾನವನ್ನು ಅವಲೋಕಿಸಿದಾಗ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಇಚ್ಚಾಶಕ್ತಿ ಬಾಲ್ಯದಿಂದಲೇ ಬೆಳೆಸಬೇಕಿದೆ.ಈ ಒಳ್ಳೆಯ ಕಾರ್ಯ ಚಟುವಟಿಕೆಗಳಿಗೆ ನಮ್ಮ ಸಹಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಚಾರ ಗ್ರಾಮಪಂಚಾಯತ್ ಅಧ್ಯಕ್ಷರು ದಿನೇಶ್ ಶೆಟ್ಟಿ ಮಾತನಾಡಿದರು. ಅಮೃತ ಭಾರತಿ ವಿದ್ಯಾಲಯದ ಉಪಮುಖ್ಯೋಪಾಧ್ಯಾಯರು , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ್ ಹೈಕಾಡಿ ಮಾತನಾಡಿ ಗ್ರಾಮದಲ್ಲಿ ಬಾಲಗೋಕುಲ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಅತ್ಯಂತ ವೇಗವಾಗಿ ಪ್ರಾರಂಭಿಸಬೇಕಿದೆ.ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ತಮ್ಮ ಬಗೆಗೆ ಜಾಗೃತೆಯ ಭಾವದ ಅರಿವು ಬೆಳೆಸಬೇಕು .ಇದರಿಂದ ಪೋಷಕರ ಜವಾಬ್ದಾರಿ ಸ್ವಲ್ಪ ನಿರಾಳವಾಗುತ್ತದೆ. ಗ್ರಾಮದ ತಾಯಂದಿರಿಗೆ ಬಾಲಗೋಕುಲದ ಪರಿಕಲ್ಪನೆಯ , ಕಾರ್ಯಚಟುವಟಿಕೆಯ ತಿಳುವಳಿಕೆ ನೀಡಬೇಕಿದೆ ಎಂದರು.
ಮಂಗಳೂರು ಮಹಿಳಾ ವಿಭಾಗದ ಬಾಲಗೋಕುಲ ಸಹ ಸಂಯೋಜಕಿ ರಮಿತ ಶೈಲೇಂದ್ರ ಚಿಕ್ಕ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ದೂರವಿರಿಸಲು , ಸಂಪ್ರದಾಯಿಕ ಆಟಗಳಲ್ಲಿ ತಲ್ಲೀನವಾಗಿಸಲು ಬಾಲಗೋಕುಲ ಸಹಕರಿಸುತ್ತದೆ ಎಂದು ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.ಗ್ರಾಮ ವಿಕಾಸ ಹೆಬ್ರಿ ತಾಲೂಕು ಸಂಯೋಜಕರಾದ ರಾಘವೇಂದ್ರ ಭಟ್, ಹೆಬ್ರಿ ತಾಲೂಕು ಮಹಿಳಾ ವಿಭಾಗದ ಸಂಯೋಜಕರಾದ ಶ್ರೀಮತಿ. ವೀಣಾ ಆರ್ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರದಂತಹ ಜ್ಯೋತಿ,ಬಾಲಗೋಕುಲದ ತರಗತಿಯನ್ನು ಸ್ವ ಇಚ್ಚೆಯಿಂದ ನಡೆಸಿಕೊಂಡು ಹೋಗಲು ಒಪ್ಪಿಕೊಂಡಿರುವ ನಂದಿತಾ ಕಾಮತ್, ಬಾಲಗೋಕುಲ ಕಾರ್ಕಳ ವಿಭಾಗದ ಪ್ರಮುಖರದಂತಹ ಮಾತಾಜಿ ಸವಿತಾ, ಚಾರ ಪಂಚಾಯತ್ ಸದಸ್ಯೆ ಶಶಿಕಲಾ ಮತ್ತು ಧರ್ಮಸ್ಥಳ ಸಂಘದ ಸೇವಾ ಕಾರ್ಯಕರ್ತೆ ಶ್ರೀಮತಿ ಲತಾ ,ಪೋಷಕರು, ಮಕ್ಕಳು ಉಪಸ್ಥಿತರಿದ್ದರು.
ಇಂದಿನ ಅವಧಿಯಲ್ಲಿ ಮಕ್ಕಳಿಗೆ ಅಭಿನಯಗೀತೆ,ಭಜನೆಯನ್ನು, ದೇಶೀಯ ಆಟಗಳನ್ನು ಸವಿತಾ ಮತ್ತು ರಮಿತಾ ರವರು ಹೇಳಿಕೊಟ್ಟರು. ಪ್ರತಿ ಭಾನುವಾರದಂದು ಸಮಯ ಸಂಜೆ 5 ಗಂಟೆಯಿಂದ 6 ಗಂಟೆಯ ತನಕ ಬಾಲಗೋಕುಲ ನಡೆಯುತ್ತದೆ. ಕಾರ್ಯಕ್ರಮದಲ್ಲಿ ಮಕ್ಕಳ ಸಂಖ್ಯೆ -23, ಪೋಷಕರು 13 ಉಪಸ್ಥಿತರಿದ್ದರು.ಶಾಂತಿ ಮಂತ್ರದೊಂದಿಗೆ ಅವಧಿ ಸಂಪನ್ನಗೊಂಡಿತು.ಆಗಮಿಸಿದ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ವನ್ನು ನಚಿಕೇತ ವಿದ್ಯಾಲಯ ಬೈಲೂರು ಮುಖ್ಯೋಪಾಧ್ಯಾಯಿನಿ ಲಕ್ಷ್ಮೀಮಯ್ಯ ಚಾರ ನಿರೂಪಿಸಿದರು.



















































