ಗಣೇಶ್ ಜಾಲ್ಸೂರು,ಶಿಕ್ಷಕರು ಕಾರ್ಕಳ

ಹೌದು..ಎಸ್ ಜಾನಕಿಯಮ್ಮ
ಭಾರತದ ಶ್ರೇಷ್ಠ ಗಾಯಕಿ
ಹಾಡಿದ ಹಾಡುಗಳು
ಊರೂರು ಸಾವಿರಾರು
ಕೇಳಿದ ಕಿವಿಗಳ ಲೆಕ್ಕವಿರಿಸಿದವರಾರು ?
ನಾವೆಲ್ಲಾ..ಕೇಳಿದ್ದು.. …
ರೇಡಿಯೋದಲ್ಲಿ
ಸಿನಿಮಾ ತೆರೆಯಲ್ಲಿ
ನೋಡಿದ್ದು
ಟಿ ವಿಯಲ್ಲಿ ಡಿಜಿಟಲ್
ಮಾಧ್ಯಮದಲ್ಲಿ
ಭಾಷೆಗಳ ಎಲ್ಲೆಯಿಲ್ಲ
ಹಾಡದ ಹಾಡುಗಳಿಲ್ಲ
ಭಕ್ತಿ ಭಾವ ಸಿನಿಮಾ ಗೀತೆಗಳಲ್ಲಿ
ಎದೆ ತುಂಬಿ ಹಾಡಿದರು
ಸೋಲೇ ಇಲ್ಲಾ ಎಂದು
ಭಾರತ ಭೂಶಿರ ಮಂದಿರ
ಸುಂದರಿಯ ಕೊಂಡಾಡಿದರು
ತೆಲುಗು ನಾಡಿನಲ್ಲಿ ಜನನ
ಕನ್ನಡ ಮಣ್ಣಿನಲ್ಲಿ ಜೀವನ
ಕನ್ನಡಿಗರ ಪ್ರೀತಿಯಲ್ಲಿ ಮನಸೂರೆಗೊಂಡರು
ಸಾಂಸ್ಕೃತಿಕ ಮೈಸೂರಲ್ಲೇ
ಉಸಿರು ಚೆಲ್ಲಿದರು
ಬೆಳ್ಳಿ ಹಕ್ಕಿಯಾಗಿ ಹಾಡಿ ಇಹವ
ಬಿಟ್ಟು ಹಾರಿ ಹೋದರು
ಮತ್ತೇ ಹಾರಿ ಬರಬೇಕು
ಭಾರತದ ಕೋಗಿಲೆಯೇ
ಕನ್ನಡ ಮಾಮರವದು ಬರಿದಾಗಿದೆ
ಒಮ್ಮೆ ನಿಮ್ಮನ್ನು ಕಣ್ತುಂಬ
ಕನ್ನಡ ಮನಗಳು ಕಾಣುವಾಸೆ
ಜೊತೆಯಲಿ ಜೊತೆ ಜೊತೆಯಲಿ
ಸಾವಿರದ ಹಾಡುಗಳನ್ನು ಹಾಡುವಾಸೆ
ಅದು ಚಿರಕಾಲ ಉಳಿಯಬೇಕು
ಗಣೇಶ್ ಜಾಲ್ಸೂರು
ಶಿಕ್ಷಕರು ಕಾರ್ಕಳ












































