29.1 C
Udupi
Saturday, July 11, 2026
spot_img
spot_img
HomeBlogಇ–20 ಪೆಟ್ರೋಲ್‌ನಿಂದ ಕೆಲ ವಾಹನಗಳ ಮೈಲೇಜ್‌ 3.5% ಇಳಿಕೆ ಸಾಧ್ಯ: ಕೇಂದ್ರ ಸ್ಪಷ್ಟನೆ

ಇ–20 ಪೆಟ್ರೋಲ್‌ನಿಂದ ಕೆಲ ವಾಹನಗಳ ಮೈಲೇಜ್‌ 3.5% ಇಳಿಕೆ ಸಾಧ್ಯ: ಕೇಂದ್ರ ಸ್ಪಷ್ಟನೆ

ಹೊಸದಿಲ್ಲಿ: ಶೇ.20ರಷ್ಟು ಎಥನಾಲ್‌ ಮಿಶ್ರಿತ ಇ–20 ಪೆಟ್ರೋಲ್‌ ಬಳಸುವ ಕೆಲವು ವಾಹನಗಳಲ್ಲಿ ಇಂಧನ ಕ್ಷಮತೆ (ಮೈಲೇಜ್‌) ಸುಮಾರು ಶೇ.3.5ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಆದರೆ, ಹೆಚ್ಚಿನ ಆಕ್ಟೇನ್‌ ಮೌಲ್ಯ, ಉತ್ತಮ ಕಾರ್ಯಕ್ಷಮತೆ, ವೇಗವಾದ ದಹನ, ಸ್ವಚ್ಛ ಇಂಜಿನ್‌ ಕಾರ್ಯಾಚರಣೆ ಹಾಗೂ ಕಡಿಮೆ ಇಂಗಾಲ ಉಗುಳುವಿಕೆ ಮೊದಲಾದ ಲಾಭಗಳ ಹಿನ್ನೆಲೆಯಲ್ಲಿ ಈ ಪ್ರಮಾಣದ ಮೈಲೇಜ್‌ ಕುಸಿತವನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಎಥನಾಲ್‌ ಮಿಶ್ರಿತ ಪೆಟ್ರೋಲ್‌ (ಇಬಿಪಿ) ಕುರಿತು ಬಿಡುಗಡೆಗೊಂಡಿರುವ ಪ್ರಶ್ನೋತ್ತರ (ಎಫ್‌ಎಕ್ಯೂ) ದಾಖಲೆಯಲ್ಲಿ, ಇ–20 ಪೆಟ್ರೋಲ್‌ ಸಾಮಾನ್ಯ ಪೆಟ್ರೋಲ್‌ ಹಾಗೂ ಇ–10ಕ್ಕಿಂತ ಹೆಚ್ಚು ಗುಣಮಟ್ಟದ ಮತ್ತು ಪರಿಸರ ಸ್ನೇಹಿ ಇಂಧನವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಹಲವು ವರ್ಷಗಳ ಸಂಶೋಧನೆ, ವಾಹನ ತಯಾರಕರೊಂದಿಗೆ ಸಮಾಲೋಚನೆ ಹಾಗೂ ದೇಶೀಯ ಎಥನಾಲ್‌ ಉತ್ಪಾದನೆ ಹೆಚ್ಚಿಸುವ ಯೋಜನೆಯ ಭಾಗವಾಗಿ ಇದನ್ನು ಪರಿಚಯಿಸಲಾಗಿದೆ ಎಂದು ಹೇಳಿದೆ.

ಇ–20 ಯೋಜನೆಯನ್ನು ಅವಸರದಲ್ಲಿ ಜಾರಿಗೆ ತರಲಾಗಿದೆ ಎಂಬ ಟೀಕೆಗಳನ್ನು ಸಚಿವಾಲಯ ತಳ್ಳಿಹಾಕಿದೆ. ಎಥನಾಲ್‌ ಮಿಶ್ರಣ ಕಾರ್ಯಕ್ರಮವು 2001ರಲ್ಲೇ ಪ್ರಾಯೋಗಿಕವಾಗಿ ಆರಂಭಗೊಂಡಿದ್ದು, 2006ರ ವೇಳೆಗೆ ಆಯ್ದ ನಗರಗಳಲ್ಲಿ ಶೇ.5ರಷ್ಟು ಮಿಶ್ರಣದ ಗುರಿಯನ್ನು ನಿಗದಿಪಡಿಸಲಾಗಿತ್ತು ಎಂದು ವಿವರಿಸಿದೆ.

2014ರವರೆಗೆ ದೇಶದಲ್ಲಿ ಎಥನಾಲ್‌ ಮಿಶ್ರಣ ಪ್ರಮಾಣ ಕೇವಲ ಶೇ.1.5ರಷ್ಟಿತ್ತು. 2018ರ ರಾಷ್ಟ್ರೀಯ ಜೈವಿಕ ಇಂಧನ ನೀತಿಯ ಬಳಿಕ ಕಾರ್ಯಕ್ರಮಕ್ಕೆ ವೇಗ ಸಿಕ್ಕಿದ್ದು, ಕಬ್ಬಿನ ಜೊತೆಗೆ ವಿವಿಧ ಆಹಾರ ಧಾನ್ಯಗಳಿಂದಲೂ ಎಥನಾಲ್‌ ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ. ಕಚ್ಚಾ ತೈಲ ಆಮದು ಅವಲಂಬನೆ ಕಡಿಮೆ ಮಾಡುವುದು, ರೈತರ ಆದಾಯ ಹೆಚ್ಚಿಸುವುದು, ದೇಶೀಯ ಜೈವಿಕ ಇಂಧನ ಉತ್ಪಾದನೆಗೆ ಉತ್ತೇಜನ ನೀಡುವುದು ಹಾಗೂ ಇಂಗಾಲ ಉಗುಳುವಿಕೆ ತಗ್ಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page