ಊರು ಬೋಡು ಪುದರ್ ಬೊಡ್ಚಿ
ನಾಟಕದ ಟೈಟಲ್ ಬಿಡುಗಡೆ

ತೆಲಿಕೆದರಸೆ ಪ್ರಸನ್ನ ಶೆಟ್ಟಿ ಬೈಲೂರು ಇವರ ಸಾರಥ್ಯ ಕಥೆ ನಿರ್ದೇಶನದ 12ನೇ ಕಲಾಕೃತಿ ಊರು ಬೋಡು ಪುದರ್ ಬೊಡ್ಚಿ ನಾಟಕದ ಟೈಟಲ್ ಬಿಡುಗಡೆಗೊಂಡಿತು.
ತುಳು ಚಲನಚಿತ್ರ ಹಾಗೂ ರಂಗಭೂಮಿಯಲ್ಲಿ ಯಶಸ್ಸುಗಳಿಸಿದವರ ಅಗ್ರ ಪಂಕ್ತಿಯ ಸಾಲಿನಲ್ಲಿ ಕಾಣಿಸಿಕೊಳ್ಳುವ ಹೆಸರು ತೆಲಿಕೆದರಸೆ ಪ್ರಸನ್ನ ಶೆಟ್ಟಿ ಬೈಲೂರು.
ಇವರ ಸಾರಥ್ಯ ದ ಚೈತನ್ಯ ಕಲಾವಿದರು ಬೈಲೂರು ತಂಡವು 11 ವರ್ಷ ಪೂರೈಸಿ 12ನೇ ವರ್ಷಕ್ಕೆ ಪಾದರ್ಪಣೆ ಮಾಡಿದ ಸಂಭ್ರಮ.
ಇವರ ರಚನೆ ನಿರ್ದೇಶನದ ಬಲೆ ತೆಲ್ಪಾಲೆ, ಸ್ಟಾರ್, ಮೇ 22, ತೋಯಿನಾಯೆ ಪೋಯೆ, ಬುದ್ಧಿ ಚಪಟ್, ಪಿರ ಫೋಂಡುಗೆ, ಅಧ್ಯಕ್ಷೆರ್, ಜುಟ್ಟು ಮೀಸೆ, ವಾರ್ಡ್ ನಂಬರ್ 2nd, ಅಷ್ಟೆಮಿ, ರಾಘು ಮಾಸ್ಟ್ರು , ಹಾಗೂ ಇಂದು ಟೈಟಲ್ ಬಿಡುಗಡೆಗೊಂಡ ಊರು ಬೋಡು ಪುದರ್ ಬೊಡ್ಚಿ ನಾಟಕ.
ರಂಗಭೂಮಿಯಲ್ಲಿ ಹೊಸತನ ಬೇಕು ಎಂಬ ಇರಾದೆಯನ್ನು ಇಟ್ಟುಕೊಂಡ ಪ್ರಸನ್ನ ಶೆಟ್ಟಿಯವರು ರಂಗಭೂಮಿಯಲ್ಲಿ ಹಿಂದೆಂದೂ ಕಾಣದ ಒಂದು ಉತ್ತಮವಾದ ತಾಂತ್ರಿಕತೆಯನ್ನು ಒಳಗೊಂಡ ಅಷ್ಟೆಮಿ ನಾಟಕ 146 ಪ್ರದರ್ಶನಗಳನ್ನು ಕಂಡು, ಕಳೆದ ವರ್ಷ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಸಾರುವ ಕಥಾಂದರವನ್ನು ಕಲಾಭಿಮಾನಿಗಳಾಗಿ ಉಣಪಡಿಸಿ 121 ಪ್ರದರ್ಶನಗಳು ಇದುವರೆಗೆ ಕಂಡು, ಮುಂದಿನ ಸಾಲಿನಲ್ಲಿ ಮುಂಬೈ ಮಹಾನಗರಿಯಲ್ಲೂ ಸೇರಿ ಇನ್ನೂ 50 ಪ್ರದರ್ಶನಗಳು ಬುಕಿಂಗ್ ಪಡೆದಿರುವ ಒಂದು ಅದ್ಭುತ ನಾಟಕ ರಾಘುಮಾಸ್ಟ್ರು.
ಚೈತನ್ಯ ತಂಡದ ಪ್ರತಿ ನಾಟಕವು ತುಳು ಕಲಾಭಿಮಾನಿಗಳಿಗೆ ಸೀಮಿತವಾಗದೆ ಕನ್ನಡದ ಅಭಿಮಾನಿಗಳಿಗೂ ಮನೋರಂಜನೆ ನೀಡಲು ಸದಾ ಸಿದ್ಧವಾಗಿರುತ್ತದೆ.
ಇವರ ಸಾರಥ್ಯ ರಚನೆ ನಿರ್ದೇಶನದ ಈ ತಂಡವು ಅತ್ಯದ್ಭುತ ಕಲಾವಿದರುಗಳನ್ನು ಒಳಗೊಂಡು ಕಳೆದ ಎರಡು ವರ್ಷಗಳಲ್ಲಿ ಸತತವಾಗಿ 100ಕ್ಕೂ ಅಧಿಕ ಪ್ರದರ್ಶನಗಳನ್ನು ಪೂರೈಸಿ ಈ ಬಾರಿಯೂ ಅದೇ ಕಲಾವಿದರನ್ನು ಒಳಗೊಂಡು ಹ್ಯಾಟ್ರಿಕ್ ಸಾಧನೆಗೆ ದಾಪುಗಾಲು ಇಡುವಲ್ಲಿ ಸಜ್ಜಾಗಿದೆ.











































