
ಕಾರ್ಕಳ: ಕರಾವಳಿ ರಂಗಾಯಣ ಕಾರ್ಕಳವು ತನ್ನ ನಾಟಕ ಹಾಗೂ ರಂಗ ಚಟುವಟಿಕೆಗಳಿಗೆ ಕಲಾವಿದರು ಮತ್ತು ತಂತ್ರಜರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 12 ಕಲಾವಿದರು ಹಾಗೂ 3 ತಂತ್ರಜರ (ಸಂಗೀತ/ಧ್ವನಿ ಸಂಯೋಜಕ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ-ಪರಿಕರ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ರಂಗಭೂಮಿಯಲ್ಲಿ ಅನುಭವ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ನಾಟಕ ಶಾಲೆ, ರಾಜ್ಯದ ರಂಗಶಿಕ್ಷಣ ಕೇಂದ್ರಗಳು ಅಥವಾ ಸರ್ಕಾರ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ನಾಟಕ ವಿಭಾಗದಲ್ಲಿ ಪದವಿ, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಲಾವಿದರ ಆಯ್ಕೆಗೆ ವಯೋಮಿತಿ 18 ರಿಂದ 32 ವರ್ಷವಾಗಿದ್ದು, ತಂತ್ರಜರಿಗೆ ವಯೋಮಿತಿ ಇರುವುದಿಲ್ಲ. ಆಸಕ್ತರು ತಮ್ಮ ಸ್ವವಿವರದೊಂದಿಗೆ ಅರ್ಜಿಯನ್ನು ಜುಲೈ 15, 2026 ಸಂಜೆ 5 ಗಂಟೆಯೊಳಗೆ ವಿಶೇಷ ಕರ್ತವ್ಯಾಧಿಕಾರಿ, ಕರಾವಳಿ ರಂಗಾಯಣ, ಕೋಟಿ ಚೆನ್ನಯ್ಯ ಥೀಂ ಪಾರ್ಕ್, ಕಸಬಾ ಗ್ರಾಮ, ಕಾರ್ಕಳ ತಾಲೂಕು – 574104 ವಿಳಾಸಕ್ಕೆ ಅಂಚೆ ಅಥವಾ yaksharangayana22@gmail.com ಇ-ಮೇಲ್ ಮೂಲಕ ಸಲ್ಲಿಸಬಹುದು.
ಆಯ್ಕೆಯಾದ ತಂತ್ರಜರಿಗೆ ಮಾಸಿಕ ರೂ.25 ಸಾವಿರ, ಮೊದಲ ವರ್ಷದ ಕಲಾವಿದರಿಗೆ ರೂ.18 ಸಾವಿರ ಹಾಗೂ ಅನುಭವ ಹೊಂದಿರುವ ಎರಡನೇ ವರ್ಷದ ಕಲಾವಿದರಿಗೆ ರೂ.20 ಸಾವಿರ ಗೌರವ ಸಂಭಾವನೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9980765355, 9900987866, 7676501443, 8123471121, 08258-200845 ಸಂಖ್ಯೆಯನ್ನು ಸಂಪರ್ಕಿಸಬಹುದು.


































