ಜೂ. 21, ರಕ್ತದಾನ ಶಿಬಿರ ಕಣ್ಣಿನ ತಪಾಸಣೆ ಹಾಗೂ ಮಧುಮೇಹ ತಪಾಸಣೆ ಶಿಬಿರ
ಪದ್ಮಾವತಿ ಕಲಾಮಂದಿರ,ಮುನಿಯಾಲು

ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ರಿ. ಮುನಿಯಾಲು
“ಒಂದಿಷ್ಟು ಸಮಾಜಕ್ಕಾಗಿ” ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಮಧುಮೇಹ ತಪಾಸಣೆ ಶಿಬಿರ ದಿನಾಂಕ: 21 ಜೂನ್ 2026, ಆದಿತ್ಯವಾರ, ಬೆಳಿಗ್ಗೆ 8.30 ರಿಂದ 1.30 ರವರೆಗೆ ಪದ್ಮಾವತಿ ಕಲಾಮಂದಿರ ಮುನಿಯಾಲು ಇಲ್ಲಿ ನಡೆಯಲಿದೆ.
ಸೂಚನೆಗಳು :
▫️ ಉಚಿತ ಕಣ್ಣಿನ ತಪಾಸಣೆ ನಡೆಸಲಾಗುವುದು.
▫️ ಕನ್ನಡಕದ ಅವಶ್ಯಕತೆ ಇರುವವರಿಗೆ ಉಚಿತ ಕನ್ನಡಕ ವಿತರಿಸಲಾಗುವುದು.
▫️ ಅಗತ್ಯವಿರುವವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುವುದು.
▫️ ಮಧುಮೇಹ (ಶುಗರ್) ತಪಾಸಣೆ ಮಾಡಿಸಿಕೊಳ್ಳುವವರು ಖಾಲಿ ಹೊಟ್ಟೆಯಲ್ಲಿ ಆಗಮಿಸಬೇಕು.
▫️ 50 ಕೆ.ಜಿ. ಅಥವಾ ಅದಕ್ಕಿಂತ ಹೆಚ್ಚಿನ ತೂಕ ಹೊಂದಿರುವ ಎಲ್ಲಾ ಆರೋಗ್ಯವಂತರು ರಕ್ತದಾನ ಮಾಡಬಹುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೇವಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿ.

































