28.2 C
Udupi
Sunday, June 14, 2026
spot_img
spot_img
HomeBlogಮುದ್ರಾಡಿ ಪ್ರೌಢಶಾಲೆಯಲ್ಲಿ, ನೇತಾಜಿ ಮತದಾರರ ಕ್ಲಬ್ ಆಶ್ರಯದಲ್ಲಿ, ಶಾಲಾ ಸಂಸತ್ತು ಚುನಾವಣೆ

ಮುದ್ರಾಡಿ ಪ್ರೌಢಶಾಲೆಯಲ್ಲಿ, ನೇತಾಜಿ ಮತದಾರರ ಕ್ಲಬ್ ಆಶ್ರಯದಲ್ಲಿ, ಶಾಲಾ ಸಂಸತ್ತು ಚುನಾವಣೆ

ಹೆಬ್ರಿ:ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ 2026-27 ನೆ ಸಾಲಿನ ವಿದ್ಯಾರ್ಥಿ ಸರಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಯ್ಕೆಗಾಗಿ ಶಾಲಾ ಸಂಸತ್ತು ಚುನಾವಣೆ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಚುನಾವಣಾಧಿಕಾರಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಭವಿಷ್ಯದ ಮತದಾರರಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಸಕ್ರಿಯವಾಗಿ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಕುರಿತು ಶಾಲಾ ಚುನಾವಣೆಯನ್ನು ನಡೆಸಲಾಗುತ್ತಿದೆ. ಶಾಲೆಯ ಎಲ್ಲ ಚಟುವಟಿಕೆಗಳು ಸುಸೂತ್ರವಾಗಿ ಸಾಗಲು ವಿದ್ಯಾರ್ಥಿ ಸರಕಾರ ನೆರವಾಗುತ್ತದೆ. ಹಾಗಾಗಿ ವಿದ್ಯಾರ್ಥಿ ಮತದಾರರು ಮತದಾನದಲ್ಲಿ ಪಾಲ್ಗೊಂಡು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಹೇಳಿದರು. ಚುನಾವಣೆ ಪ್ರಕ್ರಿಯೆಯ ಎಲ್ಲ ಹಂತಗಳನ್ನು ಮಕ್ಕಳಿಗೆ ತಿಳಿಸಿ ಎಲ್ಲ ವಿದ್ಯಾರ್ಥಿ ಮತದಾರರು ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಕರೆ ನೀಡಿದರು.ಮೊಬೈಲ್ ಆಪ್ ಮೂಲಕ ನಡೆದ ಈ ಚುನಾವಣೆಯ ನೇತೃತ್ವವನ್ನು ರಘುಪತಿ ಹೆಬ್ಬಾರ್ ಹಾಗೂ ಮಹೇಶ್ ನಾಯ್ಕ್ ಕೆ. ವಹಿಸಿಕೊಂಡು ಮಕ್ಕಳ ಮೂಲಕವೇ ಇಡೀ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಚುನಾವಣಾ ಅಧ್ಯಕ್ಷಾಧಿಕಾರಿಯಾಗಿ 10 ನೆ ತರಗತಿಯ ಗಗನ್, ಮೊದಲನೇ ಮತಗಟ್ಟೆ ಅಧಿಕಾರಿಯಾಗಿ 10 ನೆ ತರಗತಿಯ ಸಾತ್ವಿಕ್, ಎರಡನೇ ಮತಗಟ್ಟೆ ಅಧಿಕಾರಿಯಾಗಿ 10 ನೆ ತರಗತಿಯ ಪೃಥ್ವಿನ್, ಮೂರನೇ ಮತಗಟ್ಟೆ ಅಧಿಕಾರಿಯಾಗಿ ಅವಿನಾಶ್, ಆರಕ್ಷಕ ಸಿಬ್ಬಂದಿಯಾಗಿ 9 ನೆ ತರಗತಿಯ ಚಿರಾಯು, ಸಹಾಯಕ ಸಿಬ್ಬಂದಿಯಾಗಿ 9 ನೆ ತರಗತಿಯ ಲಿಖಿತ್ ಪಾಲ್ಗೊಂಡು ಚುನಾವಣೆಯನ್ನು ನಡೆಸಿಕೊಟ್ಟರು.ಶಾಲಾ ಮುಖ್ಯಮಂತ್ರಿ ಸ್ಥಾನಕ್ಕೆ 10 ನೆ ತರಗತಿಯ ಪ್ರತೀಕ್ ಹಾಗೂ ಆಯುಷ್ಯಾ, ಉಪಮುಖ್ಯಮಂತ್ರಿ ಸ್ಥಾನಕ್ಕೆ 9 ನೆ ತರಗತಿಯ ಸಾನ್ವಿತ್ ಹಾಗೂ ಪ್ರಭಾವತಿ ಸ್ಪರ್ಧಿಸಿದ್ದರು.ಶಿಕ್ಷಕರಾದ ಪಿ. ವಿ.ಆನಂದ ಹಾಗೂ ಶ್ಯಾಮಲಾ ಕೊಠಾರಿ ಸಹಕರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page