ಯಾವುದೇ ರಾಜಿ ಸಂಧಾನ ನಡೆಸದೆ…, ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮಕ್ಕೆ ಒತ್ತಾಯ

ಹೆಬ್ರಿ ಗ್ಯಾಮ್ಲಿಂಗ್ ಪ್ರಕರಣದ ಕುರಿತು ವಿಸ್ಕೃತ ತನಿಖೆ ಮತ್ತು ಇಸ್ಪೀಟ್ ಅಡ್ಡೆಯ ಮುಖ್ಯಸ್ಥರನ್ನು ಬಂಧಿಸುವಂತೆ ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ.ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಹೊಸೂರು ಎಂಬಲ್ಲಿ ಪೋಲಿಸ್ ದಾಳಿಯಲ್ಲಿ ಜಿಲ್ಲೆಯ ಬಹುದೊಡ್ಡ ಇಸ್ಪಿಟ್ ಗ್ಯಾಮ್ಲಿಂಗ್ ಜಾಲವೊಂದು ಬಯಲಿಗೆ ಬಂದು ಅಲ್ಲಿ ಆಡುತ್ತಿದ್ದ ಆರೋಪಿಗಳಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಪೋಲಿಸರ ತಂಡದ ಈ ಯಶಸ್ವಿ ಕಾರ್ಯಾಚರಣೆಯನ್ನು ನಮ್ಮ ಜಿಲ್ಲಾ ಬಿಜೆಪಿ ಯವಮೊರ್ಚಾ ತಂಡ ಮುಕ್ತವಾಗಿ ಪ್ರಶಂಶಿಸುತ್ತದೆ.
ಆದರೆ ಅದರ ನಂತರ ಆದಂತಹ ಕೆಲವು ಘಟನೆಗಳು ಸಾರ್ವಜನಿಕವಾಗಿ ಅನುಮಾನ ಮೂಡುತ್ತಿದೆ. ಪೋಲಿಸರು ಕೇವಲ ಆಡುತ್ತಿದ್ದವರನ್ನು ಮಾತ್ರ ಬಂಧಿಸಿರುವುದು. ಅದರ ಮುಖ್ಯ ರೂವಾರಿಗಳು ಬಹಿರಂಗವಾಗಿ ಯಾವುದೇ ಭಯವಿಲ್ಲದೆ ತಿರುಗುತ್ತಿದ್ದಾರೆ. ಜೊತೆಗೆ ಈ ಕೇಸನ್ನು ಮುಚ್ಚಿ ಹಾಕಿಸಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂಬ ಮಾಹಿತಿಯು ಇದೆ. ಒಂದು ಗ್ರಾಮೀಣ ಭಾಗದ ಪರಿಸರದಲ್ಲಿ ಇರುವ ಯುವ ಸಮೂಹವನ್ನು ದಾರಿ ತಪ್ಪಿಸುವ ಕೆಲಸ ಈ ಗುಂಪು ನಡೆಸುತ್ತಿದೆ. ಇದಕ್ಕೆ ಪ್ರಭಾವಿಗಳ ಕೈವಾಡವು ಮತ್ತು ಆಶ್ರಯವು ಇದೆ. ಹಾಗಾಗಿ ಹಲವು ಸಮಯಗಳಿಂದ ಅತ್ಯಂತ ವ್ಯವಸ್ಥಿತವಾಗಿ ಅದರಲ್ಲು ಕೆಲವು ಉಪಕರಣಗಳನ್ನು ಕಂಪ್ಯೂಟರ್ ಗಳನ್ನು ಬಳಸಿ ಅಧುನಿಕ ರೀತಿಯಲ್ಲಿ ಗ್ಯಾಮ್ಲಿಂಗ್ ನಡೆಸುತ್ತಿದ್ದಾರೆ.
ಇದರ ಜೊತೆಗೆ ಬಾಡಿಗೆಯ ಶಾಮಿಯಾನ, ಕುರ್ಚಿ, ಟೇಬಲ್ಗಳನ್ನು ಬಳಸಿಕೊಂಡು ಒಂದು ಉದ್ಯಮದ ರೀತಿ ಈ ಗ್ಯಾಮ್ಲಿಂಗ್ ನಡೆಸುತ್ತಿದ್ದಾರೆ. ಇದಕ್ಕೆ ದೂರದ ಮಂಗಳೂರಿನಿಂದ ಕೆಲವು ಮಂದಿ ಆಗಮಿಸುತ್ತಿದ್ದಾರೆ ಎಂಬು ಸುದ್ದಿಯೂ ಇದೆ. ಹಾಗಾಗಿ ಈ ಅನೈತಿಕ ಕೃತ್ಯಗಳಿಂದ ಸ್ಥಳಿಯ ಯುವಕರು ದಾರಿ ತಪ್ಪುವ ಸಾದ್ಯತೆ ಹೆಚ್ಚಿದ್ದು ಅದಕ್ಕಾಗಿ ಇದರ ಬೇರು ಸಮೇತ ಹಿಡಿದು ತಕ್ಕ ಶಿಕ್ಷೆ ನೀಡಬೇಕು ಹಾಗೂ ಕೃತ್ಯ ನಡೆಸುತ್ತಿದ್ದ ಮನೆ ಜಾಗವನ್ನು ಸೀಜ್ ಮಾಡಬೇಕು. ಬಂಧಿತ ಆರೋಪಿಗಳು ಕಿಂಗ್ ಪಿನ್ ಗಳ ಹೆಸರು ತಿಳಿಸಿದರೂ ಈವರೆಗೆ ಯಾವುದೇ ಪರಿಣಾಮಕಾರಿ ಕ್ರಮಗಳು ಆಗಲಿಲ್ಲ. ಇಂತಹ ಪ್ರಕರಣಗಳಲ್ಲಿ ಸ್ಥಳೀಯ ಪೋಲಿಸರು ಯಾವುದೇ ರಾಜಿ ಸಂಧಾನಗಳನ್ನು ನಡೆಸದೆ ತನಿಖೆ ನಡೆಸಬೇಕು.
ಈ ಗ್ಯಾಮ್ಲಿಂಗ್ ಅತ್ಯಂತ ವ್ಯವಸ್ಥಿತವಾಗಿ ಕಾನೂನಿನ ಯಾವುದೇ ಭಯವಿಲ್ಲದೆ ನಡೆಸುತ್ತಿದ್ದಾರೆ. ಈ ಕುರಿತು ಸ್ಥಳೀಯ ಯುವಕರು ಅನೇಕ ಬಾರಿ ನಮ್ಮ ಗಮನಕ್ಕೆ ತಂದಿರುತ್ತಾರೆ. ಹಾಗಾಗಿ ಈ ಪ್ರಕರಣವನ್ನು ತಾವೇ ಖುದ್ದಾಗಿ ಅತ್ಯಂತ ಗಂಭೀರವಾಗಿ ತೆಗೆದುಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಬಿಜೆಪಿ ಯುವ ಮೋರ್ಚಾ ಮನವಿ ಸಲ್ಲಿಸುವುದರ ಮೂಲಕ ಆಗ್ರಹಿಸಿದೆ.

































