
ಕಾರ್ಕಳ ತಾಲೂಕಿನ ಜೋಡುರಸ್ತೆ ಸಾಯಿಪಂಚಮಿಯ ಪ್ರೀತಿ ಮಧುಕರ್ ಶೆಟ್ಟಿ ದಂಪತಿಗಳ ಮಗನಾದ ಮೆದಾಂಶ್ ಮಧುಕರ್ ಶೆಟ್ಟಿ ಬ್ಯಾ0ಕಕ್ ನಲ್ಲಿ ನಡೆದ 12 ನೇ ತಿರಕ್ ಟೇಕ್ವಾ0ಡೋ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕವನ್ನು ಪಡೆದು ಸಾಧನೆಗೈದಿರುತ್ತಾನೆ,
ಸುರೇಶ್ ದೇವಾಡಿಗ ಇವರಿಂದ ಅಭ್ಯಾಸ ನಿರತನಾಗಿದ್ದ ಈತ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಹಿರ್ಗಾನ ಸಂಸ್ಥೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸಂಸ್ಥೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿದ್ದಾರೆ.
ಇವನ ಸಾಧನೆಗೆ ವಿದ್ಯಾ ಸಂಸ್ಥೆ, ಬಂಟರ ಸಂಘ,ಹಾಗೂ ಊರಿನ ಸರ್ವರೂ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

































