ಶಾಸಕರ ಮೌನಕ್ಕೆ ಆಕ್ರೋಶ, ಕ್ರಮ ಕೈಗೊಳ್ಳುವಂತೆ ಆಗ್ರಹ
ಜನಪರ ಕಾಳಜಿಯ ಶಾಸಕ ನಮ್ಮೂರಿಗೂ ಬೇಕಿತ್ತು: ಶುಭದರಾವ್

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಮನೆಗಳಿಂದ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ಕಸ ಸಂಗ್ರಹ ಮಾಡದ ಪರಿಣಾಮ ಎಲ್ಲಾ ಕಡೆಯಲ್ಲಿಯೂ ಕಸದ ರಾಶಿಯಿಂದಾಗಿ ಗಬ್ಬು ವಾಸನೆ ಬೀರುತಿದ್ದು ಸಾರ್ವಜನಿಕರು ನಡೆದಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ ಪುರಸಭೆ ತಕ್ಷಣ ಕ್ರಮ ಜರುಗಿಸಬೇಕು ಇಂತಹ ಪರಿಸ್ಥಿತಿಯಲ್ಲಿ ಶಾಸಕರ ನಿರ್ಲಕ್ಷ ಸರಿಯಲ್ಲ ನಮ್ಮೂರಿಗೂ ಒಬ್ಬ ಜನಪರ ಕಾಳಜಿಯ ಒಬ್ಬ ಶಾಸಕ ಇರಬೇಕಿತ್ತು ಎಂದೆನಿಸುತ್ತಿದೆ ಎಂದು ಪುರಸಭೆಯ ನಿಕಟಪೂರ್ವ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಖಾಸಗಿ ಸಂಸ್ಥೆಯವರು ಕಸ ವಿಂಗಡೆಯ ಜವಾಬ್ದಾರಿ ವಹಿಸಿಕೊಂಡಿದ್ದ ಪರಿಣಾಮ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿತ್ತು ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಉತ್ತಮ ಸೇವೆಯನ್ನು ಮಾಡುತ್ತಿದ್ದರು ಆದರೆ ಅವರಿಗೆ ನೀಡಿದ ರಾಜಕೀಯ ಪ್ರೇರಿತವಾದ ಕಿರುಕುಳದ ಪರಿಣಾಮ ಅವರು ಅರ್ಧದಲೇ ಬಿಟ್ಟುಹೋದ ಪರಿಣಾಮ ಸಾರ್ವಜನಿಕರು ಸಮಸ್ಯೆಯನ್ನು ಅನುಭವಿಸುವಂತಾಗಿದೆ.
ನಮ್ಮ ಆಡಳಿತದ ಅವಧಿಯಲ್ಲಿ ಕಸ ವಿಲೇವಾರಿಯಲ್ಲಿ ಕಾರ್ಕಳ ಪುರಸಭೆಯು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗೆ ಪಾತ್ರವಾಗಿತ್ತು ಆದರೆ ಈಗಿನ ಪರಿಸ್ಥಿತಿ ಚಿಂತಾಜನಕವಾಗಿದೆ ಶಾಸಕರು ತಕ್ಷಣ ಕಾಳಜಿ ವಹಿಸಿ ಕ್ರಮ ಜರುಗಿಸಲು ಪ್ರಯತ್ನಿಸಬೇಕು ಎಂದು ಶುಭದರಾವ್ ಆಗ್ರಹಿಸಿದ್ದಾರೆ.
































