ಎಂಪಿಎಂ ವಿದ್ಯಾರ್ಥಿಗಳು ನಮ್ಮ ಆಸ್ತಿ: ಪ್ರೊ. ಸುರೇಶ್ ರೈ, ಪ್ರಾಂಶುಪಾಲರು
ವಾರ್ಷಿಕೋತ್ಸವದ ಎರಡನೇ ದಿನದ ಸಂಭ್ರಮದಲ್ಲಿ, ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ

ದಿನಾಂಕ 22.4.2026 ರಂದು ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡನೇ ದಿನದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಂಭ್ರಮದಿಂದ ನೆರವೇರಿತು.ಕಾಲೇಜಿನ ಯಶಸ್ಸಿನ ಸಂಭ್ರಮಕ್ಕೆ ಸಾಕ್ಷಿಯಾದ ಪ್ರಾಂಶುಪಾಲರಾದ ಪ್ರೋ.ಸುರೇಶ್ ರೈ ಕೆ ಯವರು ನಮ್ಮ ವಿದ್ಯಾರ್ಥಿಗಳು ನಮ್ಮ ಆಸ್ತಿ ಎಂದು ಹೆಮ್ಮೆಯಿಂದ ಹೇಳುತ್ತಾ ಎಲ್ಲರನ್ನು ಸ್ವಾಗತಿಸಿದರು.
ನಂತರ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಎಂಕಾಂ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಗಳಿಸಿದ ಸೃಜನ ಚಿಪ್ಲೂಂಕರ್, ಐದನೇ ರ್‍ಯಾಂಕ್ ಗಳಿಸಿದ ವಿಜೇತ,ಬಿಕಾಂನಲ್ಲಿ ಐದನೇ ರ್‍ಯಾಂಕ್ ಗಳಿಸಿದ ಅನನ್ಯ ಇವರನ್ನು ಈ ಸಂದರ್ಭದಲ್ಲಿ ಸಂತಸದಿಂದ ಸನ್ಮಾನಿಸಲಾಯಿತು. ಈ ಕಾಲೇಜಿನಿಂದ ವರ್ಗಾವಣೆಗೊಂಡಿರುವ ಸಹಾಯಕ ಪ್ರಾಧ್ಯಾಪಕರಾದ ಡಾ. ದಿವ್ಯ ಪ್ರಭು,ಮೈತ್ರಿ,ಸುಷ್ಮಾ ಮಂಜುನಾಥ್ ಹಾಗೂ ಬೋಧಕೇತರ ಸಿಬ್ಬಂದಿ ಕಿರಣ್ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ಸಾಧನ ಸಿರಿ ಪ್ರಶಸ್ತಿ ಪಡೆದ ವಿಶೇಷ ಚೇತನ ವಿದ್ಯಾರ್ಥಿ ಶ್ರೀಮನ್ನ ಬಳ್ಳಾಲ್ ಹಾಗೂ ಕಾಲೇಜಿಗೆ ಎರಡು ಕಂಪ್ಯೂಟರ್ ಗಳನ್ನು ನೀಡಿದ ಸ್ನೇಹ ಬಲ್ಲಾಳ್ ಇವರನ್ನು ಸನ್ಮಾನಿಸಲಾಯಿತು.ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ನಮ್ಮ ಕಾಲೇಜಿನ ಏಳು ಜನ ವಿದ್ಯಾರ್ಥಿಗಳನ್ನು ಹೆಮ್ಮೆಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾನ್ಯ ಶಾಸಕರಾದ ಸುನಿಲ್ ಕುಮಾರ್. ವಿ ಇವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವರ್ಷದಿಂದ ವರ್ಷಕ್ಕೆ ಕಾಲೇಜು ಶಿಕ್ಷಣ, ಕ್ರೀಡೆ,ಸಾಮಾಜಿಕ ಕಾರ್ಯಗಳಲ್ಲಿ ಪ್ರಗತಿಯ ಪಥದಲ್ಲಿದ್ದು ಹರ್ಷ ತಂದಿದೆ ಎನ್ನುತ್ತಾ, ಎಐ ತಂತ್ರಜ್ಞಾನದ ಜೊತೆಗೆ ಹೆಜ್ಜೆ ಇಡುತ್ತ ವಿದ್ಯಾರ್ಥಿಗಳು ಬದುಕನ್ನು ಸಂಭ್ರಮಿಸಬೇಕು ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸೌಮ್ಯ ಹೆಚ್ ಕೆ ಸಂಚಾಲಕರು ಸಾಂಸ್ಕೃತಿಕ ಸಂಘ, ಡಾ.ಜಯಭಾರತಿ ಎ ದೈಹಿಕ ಶಿಕ್ಷಣ ನಿರ್ದೇಶಕರು, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳಾದ ಡಾ.ಚಂದ್ರಾವತಿ, ಪೋಷಕ ವೇದಿಕೆ ಅಧ್ಯಕ್ಷರಾದ ರಾಜಾರಾಮ್ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಾರ್ಯದರ್ಶಿಗಳಾದ ಧನುಷ್,ಪ್ರಣಿಶ್,ವಿಖ್ಯಾತ,ಶ್ರೀ ರಕ್ಷಾ,ಸೂರಜ್,ವಿನಯ್ ಉಮೇಶ್ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕರಾದ ಜ್ಯೋತಿ ಜನ್ನೆಇವರು ವಂದಿಸಿದರು. ವಿಜೇತ ದ್ವಿತೀಯ ಎಂಕಾಂ ಹಾಗು ದಿವ್ಯ ದೇವಾಡಿಗ ಅಂತಿಮ ಬಿಕಾಂ ಕಾರ್ಯಕ್ರಮವನ್ನು ನಿರೂಪಿಸಿದರು.













