32.3 C
Udupi
Tuesday, April 21, 2026
spot_img
spot_img
HomeBlogಅಂಡಮಾನ್ ಸಮುದ್ರದಲ್ಲಿ ದೋಣಿ ದುರಂತ: ನೂರಾರು ಮಂದಿ ನಾಪತ್ತೆ

ಅಂಡಮಾನ್ ಸಮುದ್ರದಲ್ಲಿ ದೋಣಿ ದುರಂತ: ನೂರಾರು ಮಂದಿ ನಾಪತ್ತೆ

ಢಾಕಾ: ಬಾಂಗ್ಲಾದೇಶದಿಂದ ಮಲೇಷ್ಯಾಕ್ಕೆ ಅಕ್ರಮವಾಗಿ ಸಾಗುತ್ತಿದ್ದ ಸುಮಾರು 250 ರೋಹಿಂಗ್ಯಾ ನಿರಾಶ್ರಿತರು ಹಾಗೂ ಕೆಲವು ಬಾಂಗ್ಲಾ ನಾಗರಿಕರನ್ನು ಹೊತ್ತಿದ್ದ ದೋಣಿ ಅಂಡಮಾನ್ ಸಮುದ್ರದಲ್ಲಿ ಮುಳುಗಿದ ದುರ್ಘಟನೆ ನಡೆದಿದೆ. ಈ ಅಪಘಾತದಲ್ಲಿ ನೂರಾರು ಮಂದಿ ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿವೆ.

ಲಭ್ಯವಾದ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಯ ಟೆಕ್ನಾಫ್ ಪ್ರದೇಶದಿಂದ ಈ ಟ್ರಾಲರ್ ಮಲೇಷ್ಯಾಕ್ಕೆ ಪ್ರಯಾಣ ಆರಂಭಿಸಿತ್ತು. ಅನುಮತಿತ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತಿದ್ದ ಈ ದೋಣಿ, ಸಮುದ್ರದಲ್ಲಿ ಉಂಟಾದ ತೀವ್ರ ಗಾಳಿ ಹಾಗೂ ಭಾರೀ ಅಲೆಗಳ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಕೊನೆಗೆ ಮುಳುಗಿದೆ ಎಂದು ತಿಳಿದುಬಂದಿದೆ.

ವಿಶ್ವಸಂಸ್ಥೆಯ ವರದಿ ಪ್ರಕಾರ, ಮ್ಯಾನ್ಮಾರ್‌ನ ರಾಖೈನ್ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿನ ದುಸ್ಥಿತಿ ಕಾರಣದಿಂದ ರೋಹಿಂಗ್ಯಾ ಜನರು ಇಂತಹ ಅಪಾಯಕರ ಸಮುದ್ರ ಪ್ರಯಾಣಗಳನ್ನು ಕೈಗೊಳ್ಳುತ್ತಿದ್ದಾರೆ.

ಈಗಾಗಲೇ ಬಾಂಗ್ಲಾದೇಶದಲ್ಲಿ 10 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಆದರೆ, ಅವರಿಗೆ ಉದ್ಯೋಗಾವಕಾಶಗಳು ಹಾಗೂ ಭದ್ರತೆಯನ್ನು ಒದಗಿಸಲು ಜಾಗತಿಕ ಸಮುದಾಯದಿಂದ ಹೆಚ್ಚಿನ ಆರ್ಥಿಕ ನೆರವು ಮತ್ತು ಸಹಕಾರ ಅಗತ್ಯವಿದೆ ಎಂದು UNHCR ಮತ್ತು IOM ಒತ್ತಾಯಿಸಿವೆ.

ಇನ್ನೂ ಸಮುದ್ರದಲ್ಲಿ ಕಾಣೆಯಾಗಿರುವವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯದ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ. ಆದರೆ ಸಾವಿನ ಪ್ರಮಾಣ ಹೆಚ್ಚಿರಬಹುದು ಎಂಬ ಆತಂಕ ಹೆಚ್ಚುತ್ತಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page